ಶ್ರೀ ಶಿವಾಜಿ ಮಹಾರಾಜರ 395ನೇ ಜಯಂತಿ ಆಚರಣೆ

ಹುಕ್ಕೇರಿ: ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ – ಏಪ್ರಿಲ್ ೩, ೧೬೮೦) ಹಿಂದೂ ಸ್ವರಾಜ್ಯದ ಸ್ಥಾಪಕರು.ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು.ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು.

ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ.

ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಹುಕ್ಕೇರಿ ತಾಲೂಕ ಆಡಳಿತ ಕಚೇರಿಯಲ್ಲಿ ಶ್ರೀ ಶಿವಾಜಿ ಮಹಾರಾಜರ 395ನೇ ಜಯಂತಿ ಶ್ರೀ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಸರ್ವರಿಗೂ ಶ್ರೀ ಶಿವಾಜಿ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು ಕೋರಿದವರು ಶ್ರೀಮತಿ ಮಂಜುಳಾ ನಾಯಕ್ ತಹಶೀಲ್ದಾರ್ ಹುಕ್ಕೇರಿ ಕೋರ್ಟ್ ಸರ್ಕಲ್ ಶ್ರೀ ಶಿವಲಿಂಗೇಶ್ವರ ಗುಡಿ ಹತ್ತಿರ ಶ್ರೀ ಶಿವಾಜಿ ಮಹಾರಾಜರ ಶಿವಜ್ಯೋತಿ ಆಗಮಿಸಿತು

ಶ್ರೀ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಶ್ರೀ ಅಭಿನವ ಮಂಜುನಾಥ್ ಮಹಾಸ್ವಾಮಿಗಳು ಕ್ಯಾರ ಗುಡ್ . ಹಾಗೂ ಶ್ರೀಮತಿ ಮಂಜುಳಾ ನಾಯಕ್ ತಹಶೀಲ್ದಾರ್ ಹಾಗೂ ಹುಕ್ಕೇರಿ ಪೊಲೀಸ್ ಠಾಣೆಯ ಸಿ ಪಿ ಐ ಸಾಹೇಬರಾದ ಮಹಾಂತೇಶ್ ಬಸಾಪುರ ಇವರು ಶಿವ ಜೊತಿಗೆ ಚಾಲನೆಯನ್ನು ನೀಡಿದರು ಈ ಸಂದರ್ಭದಲ್ಲಿ ಹಿರಾ ಶುಗರ ನೂತನ ಉಪಾಧ್ಯಕ್ಷರಾದ ಶ್ರೀ ಅಶೋಕ್ ಪಟ್ಟಣಶೆಟ್ಟಿ. ಪ್ರಸಾದ ಖಾಡೆ.ಶ್ರೀ ಮಾರುತಿ ಪವಾರ್. ಶ್ರೀ ಪ್ರಭಾಕರ್ ಸೂರ್ಯವಂಶಿ. ಶ್ರೀ ಸಿದ್ದಪ್ಪ ಬೆನಾಡಿಕರ್. ಶ್ರೀ ಅನಿಲ್ ತಿಬಲೇ. ಶ್ರೀ ರಮೇಶ್ ದಳವಿ. ಶ್ರೀ ಅನಿಲ್ ಲೋಹಾರ್ ಶ್ರೀ ರಾಜು ಜಾದವ್ ಎಲಿಮುನ್ನೋಳಿ ಶ್ರೀ ಅರುಣ್ ರವಳು ಹಾಗೂ ವಿವಿಧ ಗ್ರಾಮದ ಶಿವಭಕ್ತರು ಶಿವಜ್ಯೋತಿಗೆ ಆಗಮಿಸಿ ಕೋರ್ಟ್ ಸರ್ಕಲ್ ದಿಂದ ಬಜಾರ್ ಮಾರ್ಗವಾಗಿ ಶ್ರೀ ಅಡಿ ಸಿದ್ದೇಶ್ವರ ಮಠದ ಹತ್ತಿರ ಇರುವ ನೂತನ ಕಿಲ್ಲಾ ವರೆಗೆ ಆಗಮಿಸಿದರು ವಿವಿಧ ಗ್ರಾಮದ ಮುಖಂಡರು ಗುರು ಹಿರಿಯರು ಸ್ಥಳೀಯ ಜನರು ಮಹಿಳೆಯರು ಮಕ್ಕಳು ಯುವಕರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

ವರದಿ/ಸದಾನಂದ್ ಎಚ್

error: Content is protected !!