ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೊಷ್ಠಿ

ಹುಮನಾಬಾದ : ತಾಲೂಕಿನ ಆರ್ಯಸಮಾಜ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ

ಯೋಜನೆಯಿಂದೆ ತಾಲೂಕು ಮಟ್ಟದ ಮಹಿಳಾ ವಿಚಾರಗೊಷ್ಠಿ ಕಾರ್ಯಕ್ರಮವನ್ನು ಶಾಸಕ ಡಾ. ಸಿದ್ದು ಪಾಟೀಲ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿ, ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪೂ ಮೂಡಿಸಿರುವ ಮಹಿಳೆಯರು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿದ್ದಾರೆ ಎಂದು ಉತ್ತಮ ಅಭಿಪ್ರಾಯ ಪಡಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿರುವ ಬಡವರ ಮಹಿಳೆಯರ ಇತರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ್ದು, ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಮಾಜಿ ಶಾಸಕರಾದ ಸುಭಾಷ ಪಾಟೀಲ್ ಕಲ್ಲೂರ ಮಾತನಾಡಿ ರಾಷ್ಟ್ರೀಕೃತ ಹಾಗೂ ಅನುಸ್ರಚಿತ ಬ್ಯಾಂಕ್‌ಗಳಿಂದ ಸ್ವ ಸಹಾಯ ಸಂಘಗಳಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ನೇರ ಸಾಲ ಸೌಲಭ್ಯ ದೊರಕಿಸಿಕೊಡುವ್ಯದರ ಮೂಲಕ ಕೃಷಿ, ಸ್ವ-ಉದ್ಯೋಗ, ಆರ್ಥಿಕ ಚಟುವಟಿಕೆಗಳಿಗೆ ಮುಂತಾದ ಆದಾಯ ಚಟುವಟಿಕೆಗಳನ್ನು ಕೈಗೊಳ್ಳಲು ತುಂಬಾ ಸಹಕಾರಿಯಾಗಿದೆ ಹಾಗೂ ಆಧುನಿಕ ಯುಗದಲ್ಲಿ ಮಹಿಳೆಚಿರು ಸಬಲೀಕರಣವಾಗುತ್ತದೆ. ತಮ್ಮನ್ನು ತಾವು ಸಶಕ್ತರನ್ನಾಗಿಸಿಕೊಳ್ಳಬೇಕು ಮೊಬೈಲ್ ಬಳಕೆ ಕಡಿಮೆ ಮಾಡಲು ಹಾಗೂ ಮಕ್ಕಳಿಗೆ ಅಭ್ಯಾಸ ರೂಢಿಸಿಕೊಳ್ಳಲು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ರವಿರಾಜ್ ಭಮಶೆಟ್ಟಿ ಮಾತನಾಡಿ ಮಕ್ಕಳ ಶಿಕ್ಷಣ ಹಾಗೂ ಲಾಲನೆ, ಪಾಲನೆ & ಪೋಷಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ ಕುರಿತು ಮಾಹಿತಿ ನಿಡಿದರು. ನಂತರ ಮಾತನಾಡಿದ ಪ್ರಭು ಮಾಲೆ ಕುಟುಂಬದಲ್ಲಿ ಮಹಿಳೆ ಪಾತ್ರ ಕುರಿತು ಮಾಹಿತಿ ನೀಡಿದರು. ಮಹಿಳೆ ಮನ ಪರಿವರ್ತನ ಶಕ್ತಿ ಹೊಂದಿದ್ದಾರೆ ತಾಯಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಲು ಮನೆ ಮೊದಲ ಪಾಠ ಶಾಲೆಯಂತೆ ತಾಯಿ ಮಗುವಿಗೆ ಲಾಲನೆ ಪಾಲನೆ ಪೋಷಣೆಯಲ್ಲಿ ಮಹಿಳೆ ಮುಖ್ಯ ಪಾತ್ರ ಹೊಂದಿದ್ದಾಳೆ. ತನ್ನ ಕುಟುಂಬದ ಆರ್ಥಿಕ ಪ್ರಗತಿ ಸಾಧಿಸಲು ವಿಶೇಷ ಸ್ಥಾನ ಹೊಂದಿರುವಳು ಎಂದು ತಿಳಿಸಿದರು. ಜಿಲ್ಲಾ ನಿರ್ದೇಶಕರಾದ ಪ್ರವಿಣಕುಮಾರ ಮುಖ್ಯ ಅಥಿತಿ ಸ್ಥಾನ ವಹಿಸಿದರು.

ಈ ಕಾರ್ಯಕ್ರಮದಲ್ಲಿ ನಾಗಭೂಷಣ ಸಂಗಮ, ಗೋಪಾಲಕೃಷ್ಣ ಮೊಹಾಳೆ, ತಾಲೂಕು ಯೋಜನಾಧಿಕಾರಿ ವೀರೇಶ ಎನ್. ಜ್ಞಾನವಿಕಾಸ ಸಮನ್ವಯಾಧಿಕಾರಿ ಶೀಲಾ, ಮೇಲ್ವಿಚಾರಕರ ಮಲ್ಲಯ್ಯ, ಸಂತೋಷ್ ಸವಿತಾ, ಕಾವ್ಯ, ಮಹಾದೇವಿ, ಅಶೋಕ ತಾಲೂಕಿನ ಎಲ್ಲ ಸೇವಾಪ್ರತಿನಿಧಿಗಳು, ಸಂಘದ ಸರ್ವಸದಸ್ಯರು ಮತಿತರಿದ್ದರು.

error: Content is protected !!