ವೃದ್ದೆ ಯೊಬ್ಬರಿಗೆ ಸ್ಥಳದಲ್ಲೇ ಪರಿಹಾರ ರೇಷನ್ ಹಾಗೂ ವೃದ್ಯಾಪಿವೇತನ ಸಮಸ್ಯೆಗೆ ಪರಿಹಾರ
ಹುಮನಾಬಾದ :
ತಹಶೀಲ್ದಾರ ಕಛೇರಿ ಹುಮನಾಬಾದ ದಲ್ಲಿ ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು ಸದರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗೆ ಸಂಬಂಧಪಟ್ಟ ಒಟ್ಟು 08 ಅರ್ಜಿಗಳು ಸ್ವೀಕೃತವಾಗಿದ್ದು, ಅರ್ಜಿಗಳನ್ನು ಬಗೆಹರಿಸುವಂತೆ ಸಂಬಂಧ ಪಟ್ಟ ಇಲಾಖೆ ಯವರಿಗೆ ಸೂಚನೆ ನೀಡಲಾಯಿತ್ತು. ಅದರಲ್ಲಿ ರುಕ್ಕಿಣಿಬಾಯಿ ಗಂಡ ಶಂಕರ ಚಿನಕೇರಾ ಗ್ರಾಮ, ತಾ॥ ಹುಮನಾಬಾದ ರವರಿಗೆ ಸುಮಾರು ತಿಂಗಳಿಂದ ರೇಷನ್ ವಿತರಿಸದಿರುವ ಬಗ್ಗೆ ಹಾಗೂ ವೃಧ್ಯಾಪ್ಯ ವೇತನ ಕಡಿಮೆ ನೀಡುತ್ತಿರುವ ಬಗ್ಗೆ ಅರ್ಜಿ ಸಲ್ಲಿಸಿದ್ದು, ಇದನ್ನು ಸ್ಥಳದಲ್ಲಿಯೇ ಬಗೆ ಹರಿಸಿ ಅವರಿಗೆ ಕೂಡಲೇ ರೇಷನ ನೀಡುವಂತೆ, ಸಭೆಯ ಅಧ್ಯಕ್ಷತೆ ವಹಿಸಿದ ಉಮೇಶ ಬಿ.ಕೆ ಎಸ್.ಪಿ ಕರ್ನಾಟಕ ಲೋಕಾಯುಕ್ತ, ಕಲಬುರಗಿ, ರವರು ಸಂಬಂಧ ಪಟ್ಟ ಅಧಿಕಾರಿ ರವರಿಗೆ ತಿಳಿಸಿದಾಗ, ಸಂಬಂಧ ಪಟ್ಟ ಅಧಿಕಾರಿ ರವರು ಕೂಡಲೇ ನಿಯಮದಂತೆ ರೇಷನ ವಿತರಣೆ ಮಾಡಿರುತ್ತಾರೆ.
ಈ ಸಮಯದಲ್ಲಿ ಎರಡು ಅರ್ಜಿಗಳಿಗೆ ಫಾರಂ ನಂಬರ 1&2 ಅರ್ಜಿ ನೊಂದಾಯಿಸಿಕೊಳ್ಳಲಾಯಿತ್ತುಸದರಿ ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಉಮೇಶ ಬಿ.ಕೆ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಕಲಬುರಗಿ, ಹಣಮಂತರಾಯ ಡಿ.ಎಸ್.ಪಿ ಕರ್ನಾಟಕ ಲೋಕಾಯುಕ್ತ ಬೀದರ, ಬಾಬಾಸಾಹೇಬ ಪಾಟೀಲ ಪಿ.ಐ, ಕರ್ನಾಟಕ ಲೋಕಾಯುಕ್ತ ಬೀದರ, ಉದಂಡಪ್ಪ ಪಿ.ಐ, ಕರ್ನಾಟಕ ಲೋಕಾಯುಕ್ತ ಬೀದರ, ಸಿಬ್ಬಂದಿಯವರಾದ ಶಾಂತಲಿಂಗಪ್ಪಾ, ಅಡೆಪ್ಪಾ, ಭರತ, ಕಿಶೋರ, ನಾಗಶೆಟ್ಟಿ, ಹಾತಿಸಿಂಗ ಹಾಗೂ ತಹಸೀಲ್ದಾರರು ಹುಮನಾಬಾದ, ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.