ಬಿ ಖಾತಾ ಬೃಹತ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ

ಬೆಳಗಾವಿ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿಯ ಕುಮಾರ್ ಗಂಧರ್ವ ರಂಗ ಮಂದಿರದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ
ನಿರ್ದೇಶನಾಲಯ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ವತಿಯಿಂದ “ಬಿ” ಖಾತಾ ಬೃಹತ್ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜನರ ಇಂತ ಅವಕಾಶವನ್ನು ಸದುಪಯೋಗ ಪಡೆದುಕೊಂಡಿ ಎ & ಬಿ ಖಾತಾ ಗಳ ಬಗ್ಗೆ ತಿಳುವಳಿಕೆ ನೀಡಿ ಸಾರ್ವಜನಿಕಕರು ಈ ಆಂದೋಲನ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಲಾಗಿದೆ ಜನರು ತಮ್ಮ ಅಸ್ತಿಗಳನ್ನು ಸರಿಪಡಿಸಿಕೊಂಡು ಜನರು ಭದ್ರ ಬುನಾದಿ ಹಾಕಿ ಇಡಲು ಇವು ಅನುಕೂಲ್ ವಾಗಿರುವದು ಅದರಿಂದ ಜನರು ಸದುಪಯೋಗ ಪಡೆದು ಕೊಳ್ಳಬೇಕು

ಈ ಅಭಿಯಾನದ ಉದ್ದೇಶ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, “ಎ” ಖಾತಾ ಮತ್ತು “ಬಿ” ಖಾತಾ ಪಡೆಯಲು ಪ್ರೇರೇಪಿಸುವುದಾಗಿದೆ. ಜನರು ಈ ಅಭಿಯಾನದ ಲಾಭವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.

ವರದಿ : ಸದಾನಂದ ಎಚ್

error: Content is protected !!