ಪಾಶಾಮಿಯ್ಯಾ ದರ್ಗಾ (ಮಹದೀವಿ ಖಬರಸ್ಥಾನ) ದಲ್ಲಿ ಹೈಮಾಸ್ಟ್ ದೀಪ ದುರಸ್ಥಿಗೆ SDPI ಮನವಿ 

ಹುಮನಾಬಾದ : ಪಟ್ಟಣದ ಪಾಶಾಮಿಯ್ಯಾ ದರ್ಗಾ (ಮಹದೀವಿ ಖಬರಸ್ಥಾನ) ದಲ್ಲಿ ಒಂದು ವರ್ಷದ ಹಿಂದೆ ಒಂದು ಹೈಮಾಸ್ಟ್ ಕಂಬ ಅಳವಡಿಸಲಾಗಿತ್ತು.

 

ಆದರೆ ಇನ್ನುವರೆಗೆ ಈ ದೀಪ ಉಪಯೋಗಕ್ಕೆ ಬಂದಿರುವದಿಲ್ಲ. ಕಾರಣ ಆ ಹೈಮಾಸ್ಟ್ ಕಂಬಕ್ಕೆ ಅಳವಡಿಸಿದ ದೀಪಗಳು (ಬಲ್ಟ್) ಹಳೆದು ಹಾಕಿ ಅಳವಡಿಸಲಾಗಿದೆ ಅದಕ್ಕೆ ಆ ಹೈಮಾಸ್ಟ್ ದೀಪಗಳು ಚಾಲ್ತಿಯಲ್ಲಿರುವುದಿಲ್ಲ ಎಂದು ಆರೋಪಿಸಿ

 

ಪಟ್ಟಣದ ಪ್ರಸಿದ್ಧ ದರ್ಗಾ ಒಂದರಲ್ಲಿ ಈ ಪಾಶಾಮಿಯ್ಯಾ ದರ್ಗಾ ಕೂಡಾ ಒಂದು ಹಾಗೂ ಇಲ್ಲಿ ಒಂದು ಸಮುದಾಯದ ಖಬರಸ್ಥಾನ ಇದ್ದ ಕಾರಣ ರಾತ್ರಿ ಹೊತ್ತು ಅಲ್ಲಿ ಅಂತ್ಯ ಸಂಸ್ಕಾರಕ್ಕೆ ಜನರು ಬಂದರೆ ಬಹಳ ತೊಂದರೆಯಾಗುತ್ತಿದೆ.

ಹಾಗೂ ದರ್ಗಾಕ್ಕೆ ಬರುವ ಭಕ್ತರಿಗೂ ಕೂಡ ರಾತ್ರಿ ಹೊತ್ತಿನಲ್ಲಿ ಬಂದರೆ ಚೇಳು, ಹಾವುಗಳು ಕಡಿದು ಜನರ ಜೀವಕ್ಕೆ ಹಾನಿಯಾಗುವ ಸಂಭವವಿರುವುದರಿಂದ.

 

ಈ ವಿಷಯದಲ್ಲಿ ಮುತುವರ್ಜಿವಹಿಸಿ ಒಂದು ವಾರದಲ್ಲಿ ಸದರಿ ಹೈಮಾಸ್ಟ್ ಕಂಬಕ್ಕೆ ಹೊಸದಾಗಿ ಹೈಮಾಸ್ಟ್ ಲ್ಯಾಂಪ್‌ಗಳನ್ನು (ಬಲ್ಟ್) ಅಳವಡಿಸಿ ಅಥವಾ ರಿಪೇರಿ ಮಾಡಿಸಿ ದರ್ಗಾಕ್ಕೆ ಬರುವ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಹುಮನಾಬಾದ ಮುಖ್ಯಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ಶೇಕ್ ಮಕ್ಸುದ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

error: Content is protected !!