ಸತತವಾಗಿ ಎರೆಡು ಮೂರು ದಿನ ಸುರಿದ ಮಳೆಗೆ ಮೂರು ಮನೆಗಳು ನೆಲಸಮ

ಹುಮನಾಬಾದ ಪಟ್ಟಣದ ಶಿವಪುರ ಬಡಾವಣೆಯ ಮುಲ್ತಾನಿ ಗಲ್ಲಿ ವಾರ್ಡ್ ನಂ 08ರಲ್ಲಿ ಈ ಹಿಂದೆ ಎರೆಡು ದಿನ ಸುರಿದ ಮಳೆಗೆ ಮಣ್ಣಿನ ಗೋಡೆಗಳು ನೆನೆದು ರಾತ್ರಿವೇಳೆ ಮನೆ ಕುಸಿದು ಬಿದ್ದ ಘಟನೆ ನಡೆದಿದೆ ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಮನೆಬಿಳುವ ಸಂಭವ ಕಂಡು ಮನೆಯಲ್ಲಿ ಮಲಗಿದ್ದ ಅಜ್ಜಿಗೆ ತಕ್ಷಣವೇ ಬೇರೆಡೆಗೆ ತೆಗೆದುಕೊಂಡು ಹೋದಾಗ ಈ ಘಟನೆ ಸಂಭವಿಸಿದೆ ಎಂದು ಮನೆಯವರು ತಿಳಿಸಿದ್ದಾರೆ ಇನ್ನೂ ಮನೆಯಲ್ಲಿದ್ದ ದಿನಬಳಕೆಯ ವಸ್ತುಗಳು ಮಣ್ಣು ಪಾಲಾಗಿದೆ ಎಂದು ತಿಳಿಸಿದ್ದಾರೆ, ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ, ಈ ಸಂಧರ್ಭದಲ್ಲಿ ಸ್ಥಳೀಯರು ಹಾಗೂ ಎಸ್.ಡಿ.ಪಿ.ಐ ನಾ ಸೈಯದ್ ಅಕ್ಬರ್ ರವರು ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದರು.