ಕೇಂದ್ರ-ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ವಿರೋಧಿಸಿ ಸಿ.ಪಿ.ಐ (ಎಂ.) ಪ್ರತಿಭಟನೆ

ರಾಮದುರ್ಗ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿಯನ್ನು ಪ್ರತಿಭಟಿಸಿ ಸಿ.ಪಿ.ಐ(ಎಂ) ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆದು, ಕೂಡಲೇ ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿ ತರಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.

ಕೇಂದ್ರದ ಚುಕ್ಕಾಣಿ ಹಿಡಿದರೆ ನಾವು ಬೆಲೆಗಳನ್ನು ನಿಯಂತ್ರಣದಲ್ಲಿ ತಂದು ಎಲ್ಲರಿಗೂ ಒಳ್ಳೆಯ ದಿನಗಳನ್ನು ನೀಡುತ್ತೇವೆ ಎಂದು ಹೇಳಿದ ಕೇಂದ್ರದ ಮೋದಿ ಸರ್ಕಾರ ಕಳೆದ 2 ಅವಧಿ ಮುಗಿಸಿ 3ನೇ ಅವಧಿಗೂ ಪ್ರಧಾನಿ ಆದರೂ ಬೆಲೆಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ತೈಲ ಬೆಲೆಗಳು ಮಾರುಕಟ್ಟೆಯಲ್ಲಿ ಕಡಿಮೆ ಇದ್ದರೂ ನಮ್ಮ ದೇಶದ ಪ್ರಧಾನ ಡಿಸೈಲ್ ಮತ್ತು ಪೆಟ್ರೋಲ್ ದರ ಏರಿಕೆ ಮಾಡಿ ಅದೇ ರೀತಿ ಗ್ಯಾಸ ಸಿಲೆಂಡರಗಳ ಬೆಲೆಗಳನ್ನು ಹೆಚ್ಚು ಮಾಡಿ ಬಡವರಿಗೆ ಕೊಂಡುಕೊಳ್ಳುವ ಶಕ್ತಿ ಇಲ್ಲದಂತೆ ಮಾಡಿ ಈ ದೇಶದ ಬಂಡವಾಳ ಶಾಹಿಗಳ ಜೇಬು ತುಂಬುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಸಿ.ಪಿ.ಎಂ ಪಕ್ಷದ ಜಿಲ್ಲಾ ಮುಖಂಡರಾದ ಜಿ.ಎಂ. ಜೈನೇಖಾನ ತಹಶೀಲ್ದಾರ ಕಚೇರಿ ಮುಂದೆ ನಡೆದ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ದುಡಿಯುವ ಜನರಿಗೆ ಕನಿಷ್ಟ ವೇತನ ಇಲ್ಲದೆ ಒದ್ದಾಡುತ್ತಿರುವಾಗ ಬೆಲೆ ಏರಿಕೆಯ ಬಿಸಿಯಿಂದ ದುಡಿಯುವ ಜನತೆ ಕಂಗೆಟ್ಟಿದ್ದಾರೆ. ಚುನಾಯಿತ ಪ್ರತಿನಿಧಿಗಳು ತಮ್ಮ ವೇತನ ಹೆಚ್ಚು ಮಾಡಿಕೊಳ್ಳಲು ಮುಂದಾಗುತ್ತಾರೆ ಹೊರತು ದುಡಿಯುವ ಜನರ ವೇತನ ಕುರಿತು ಮಾತನಾಡದೇ ಇರುವುದು ವಿಷಾಧನೀಯ ಎಂದು ಸಿ.ಪಿ.ಎಂ. ಪಕ್ಷದ ಮುಖಂಡ ನಾಗಪ್ಪ ಸಂಗೊಳ್ಳಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಪಕ್ಷದ ಸದಸ್ಯರಾದ ತುಳಸಮ್ಮ ಮಾಳದಕರ, ಮಾರುತಿ ಮುದಗುರಿ, ತೌಫಿಕ ಗೋಕಾಕ, ಸಿದ್ದಿಂಗಪ್ಪ ಸಿಂಗಾರಗೊಪ್ಪ ಮತ್ತು ತಾಹೀರಾ ಮಕಾನದಾರ ಮುಂತಾದವರು ಭಾಗವಹಿಸಿದ್ದರು. ವೀರಭದ್ರ ಕಂಪ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ವರದಿ -Md ಸೋಹಿಲ ಭೈರಕದಾರ ಜೆಕೆ ನ್ಯೂಸ ಕನ್ನಡ ರಾಮದುರ್ಗ

error: Content is protected !!