ಹೆಲ್ಪಿಂಗ್ ಹ್ಯಾಂಡ್ ಗ್ರೂಪ್ ರಾಮದುರ್ಗ ವತಿಯಿಂದ ಎಂ ಕೆ ಯಾದವಾಡಗೆ ಸತ್ಕಾರ ಸಮಾರಂಭ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಭಾಗ್ಯ ನಗರದಲ್ಲಿ ಅಭಿನಂದನಾ ಸಮಾರಂಭ ಕಾರ್ಯಕ್ರಮ ಜರಗಿತು.

ಪ್ರತಿಷ್ಠಿತ ಹಿಂದೂ ಮುಸ್ಲಿಂ ಕ್ರಿಸ್ಚಿಯನ್ ಯುನೈಟೆಡ್ ಅಂತರಾಷ್ಟ್ರೀಯ ಸಂಸ್ಥೆಯ 16 ನೇ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ ಮತ್ತು ಯುನೈಟೆಡ್ ಸ್ಟೇಟ್ಸ್ ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿ 2025ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಲೇಷಿಯಾ ದೇಶದ ರಾಜಧಾನಿ ಕೌಲಾಲಂಪುರದಲ್ಲಿ ಅದ್ದೂರಿಯಾಗಿ ಜರುಗಿತು

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 17 ಕ್ಕಿಂತ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಭಾರತ ಸೇರಿ ವಿವಿಧ ದೇಶಗಳ 24 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸಮಾಜ ಸೇವಕ, ಇಂಡಿಯನ್ ಟಿವಿ ಸುದ್ದಿ ವಾಹಿನಿಯ ಮುಖ್ಯಸ್ಥ ಎಂ ಕೆ ಯಾದವಾಡ ಅವರಿಗೆ 16 ನೇ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಸಮಾರಂಭದಲ್ಲಿ ಜೈಭೀಮ್ ಯುವ ಜಾಗ್ರತ ಸೇನೆ, ವಿಜಯ ಸೇನಾ ಸಮಿತಿ, ಹೆಲಪಿಂಗ್ ಹ್ಯಾಂಡ್ಸ್ ಗ್ರೂಪ್ ರಾಮದುರ್ಗ ,SDPI ಪಕ್ಷದ ಮುಖಂಡರು, ಬಿಜೆಪಿ ಮುಖಂಡ, ತೌಕಿರ್ ಖತಿಬ್,ಯಾದವಾಡ ಕುಟಂಬ,ಸನ್ಮಾನಿಸಿದರು ಮತ್ತು ಹಲವಾರು ಅತಿಥಗಳು ಮಾತನಾಡಿ ಅವರ ಪ್ರಶಸ್ತಿ ಪುರಸ್ಕೃತ ಎಂ ಕೆ ಯಾದವಾಡ ಅವರಿಗೆ ಅಭಿನಂದಿಸಿದರು.

ಈ ಸಂಧರ್ಭದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಗ್ರೂಪ್ ರಾಮದುರ್ಗ ಅಧ್ಯಕ್ಷ md ಸೋಹೀಲ ಭೈರಕದಾರ, ಉಪಾಧ್ಯಕ್ಷ ದಾದಾಪೀರ್ ಕೆರೂರ್, ಕಾರ್ಯಧ್ಯಕ್ಷ ಸದ್ದಾಮ್ ಮೂಕಾಶಿ, ಇರ್ಫಾನ್ ಅಹಮದ್ ಶೇಖ , ಯಾಸಿನ್ ಬೋಜಗಾರ್ , ಸಲೀಮ್ ಕೆರೂರ , ರಿಯಾಜ ಗಿಡದನ್ನವರ್, ಅಬ್ದುಲ ಕಲೆಗಾರ್, ಅಲ್ ಮದನಿ ಟ್ರೇಸ್ಟ ಅಧ್ಯಕ್ಷ ಸದ್ದಾಂ ಖಲಿಫ ಮತ್ತು ಪದಾಧಿಕಾರಿಗಳು, ವಿಜಯ ಸೇನಾ ಸಮಿತಿ, ಸಂಸ್ಥಾಪಕ ವಿಜಯ ನಾಯಕ, ಕಾರ್ಮಿಕ ಮುಖಂಡ, ಗೈಬು ಜೈನೆಖಾನ, KMU ಅಧ್ಯಕ್ಷ ಶಫಿ ಬೆಣ್ಣಿ, ಜನಪರ ಟ್ರೇಸ್ಟ್ ಅಧ್ಯಕ್ಷ ಸುಭಾಸ್ ಗೋಡಖೆ, ಮುಹಮ್ಮದಗೌಸ್ ಖಾಜಿ, ಬಿಜೆಪಿ ಮುಖಂಡ, ಮುಹಮ್ಮದಬೇಗ ನಿಗದಿ ಉಪಸ್ಥಿತರಿದ್ದರು.

ವರದಿ : md ಸೋಹೆಲ್ ಭೈರಕದಾರ

error: Content is protected !!