ಚಿಂಚೋಳಿ ತಾಲೂಕಿನ ಸುಲೇಪೇಟನಿಂದ ಹೋಡೆ ಬೀರನಹಳ್ಳಿ ಹೋಗುವ ಮುಖ್ಯ ರಸ್ತೆಯಲ್ಲಿ ಭಾರಿಗಾಳಿಗೆ ಹತ್ತಾರು ಮರಗಳು ನೆರಕ್ಕೆ ಉರುಳಿದವು, ಇದರಿಂದ ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ನೂರಾರು ವಾಹನಗಳು ಮತ್ತು ವಾಹನ ಸವಾರರು ಕೆಲ ಗಂಟೆಗಳ ಕಾಲ ನಿಂತ ಸ್ಥಳದಲ್ಲಿ ನಿಲ್ಲುವಂತ ಸ್ಥಿತಿ ಆಗಿದ್ದು ಇದರಿಂದ ನೂರಾರು ಸಂಖ್ಯೆಯ ವಾಹನ ಸವಾರರು ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು. ನಟರಾಜ ಅರಣ್ಯಾಧಿಕಾರಿ ಪ್ರತಿಕ್ರಿಯಿಸಿ ಬಾರಿಗಾಳಿಗೆ ರಸ್ತೆಯ ಪಕ್ಕದಲ್ಲಿರುವ ಮರಗಳು ನೆರಳಕ್ಕೆ ಉರುಳಿದ್ದು ನಮ್ಮ ಅರಣ್ಯ ಸಿಬ್ಬಂದಿಗಳು ರಸ್ತೆ ಸುಗಮಗೊಳಿಸಲು ಕೆಲಸ ರಲ್ಲಿ ನಿರತರಾಗಿದ್ದಾರೆ ಆದಷ್ಟು ಬೇಗ ವಾಹನಗಳು ಸಂಚರಿಸುವಂತೆ ಮಾಡಲಾಗುತ್ತದೆ ಎಂದು ಹೇಳಿದರು. ರೇವಣಸಿದ್ದಪ್ಪ ಮಟ್ಟಿ ಹೊಡೆ ಬೀರನಳ್ಳಿ ಗ್ರಾಮಸ್ಥ ಪ್ರತಿಕ್ರಿಯಿಸಿ ಅತಿ ಹೆಚ್ಚು ಗಾಳಿ ಬೀಸಿದ್ದರಿಂದ ಗಿಡಗಳು ಬಿದ್ದಿದ್ದು ರಸ್ತೆ ಸಂಪೂರ್ಣ ಬಂದ್ ಆಗಿ ವಾಹನ ಸವಾರರಿಗೆ ಹಾಗೂ ಸಂಚರಿಸುವವರಿಗೆ ಕೆಲ ಗಂಟೆಗಳ ಕಾಲವರೆಗೂ ನಿಲ್ಲುವಂತ ಸ್ಥಿತಿ ನಿರ್ಮಾಣ ಆಗಿದ್ದು ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗಳು ರಸ್ತೆ ಸುಗಮಗೊಳಿಸಲಿ ಎಂದು ಹೇಳಿದರು.
ವರದಿ : ರಾಜೇಂದ್ರ ಪ್ರಸಾದ್