ಜಿಲ್ಲಾ ಉಸ್ತುವಾರಿ ಸಚಿವರೇ ಕುಡಿಯೋದಕ್ಕೆ ನೀರು ಕೊಡಿ : ಸತೀಶ ಪಾಟೀಲ

ವಿಜಯಪುರ : ವಿಜಯಪುರ ಜಿಲ್ಲೆ ವಿಜಯಪುರ ತಾಲೂಕಿನ ಮಡಸನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಜ್ವಲಂತ ಸಮಸ್ಯೆಯನ್ನು ನಿವಾರಿಸಬೇಕೆಂದು ಒತ್ತಾಯಿಸಿ ಮಡಸನಾಳ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಕನ್ನೂರ ಗ್ರಾಮದ ರೈತ ಹೋರಾಟಗಾರರಾದ ಸತೀಶ ಪಾಟೀಲ ಮಾತನಾಡಿ, ಇಂದಿನ ದಿನದಲ್ಲಿ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಇದ್ದಾವೆ. ಜಲಜೀವನ ಮಿಷನ್ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ ಜಿಲ್ಲಾ ಉಸ್ತುವಾರಿ ಸಚಿವರ ತವರೂರಲ್ಲಿ ನೀರಿನ ಜ್ವಲಂತ ಸಮಸ್ಯೆ ಉಂಟಾಗಿರುವುದು ನಾಚಿಗೇಡಿತನವಾಗಿದೆ. ಸಾಕಷ್ಟು ಭಾರಿ ನೀರಿನ ತೊಂದರೆ ಕುರಿತು ಸಂಬAಧ ಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಚಿವರಿಗೆ ವಿನಂತಿಸಿಕೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ಕುಡಿಯೋದಕ್ಕೆ ನೀರು ಕೊಡಿ. ಇದು ನಮ್ಮ ದೌರ್ಬಾಗ್ಯವಾಗಿದೆ ಎಂದು ರೈತರು ತಮ್ಮ ಸಮಸ್ಯೆಯನ್ನು ಯಾರಿಗೂ ಹೇಳದ ಪರಿಸ್ಥಿತಿವುಂಟಾಗಿದೆ. ನಮ್ಮ ಸಚಿವರಾದ ಎಂ.ಬಿ. ಪಾಟೀಲ, ಶಾಸಕರಾದ ವಿಠ್ಠಲ ಕಟಕದೊಂಡ ಇವರು ಕಾಣೆಯಾಗಿದ್ದಾರೆ. ತಮ್ಮದೇ ಸರ್ಕಾರವಿದ್ದರೂ ನೀರಿನ ಭವಣೆ ನೀಗಿಸದ ಪ್ರಶಂಸೆ ಇವರಿಗಿದೆ. ಇಂತಹ ನಾಯಕರು ನಮಗೇಕೆ ಬೇಕು ಎಂದು ಗ್ರಾಮಸ್ಥರು ಆಡಿಕೊಳ್ಳುತ್ತಿದ್ದಾರೆ. ಕನ್ನೂರದಿಂದ 2.5 ಕಿ.ಮೀ ದೂರದಲ್ಲಿರುವ ಮಡಸನಾಳ ಗ್ರಾಮಕ್ಕೆ ನಿರ್ಮಾಣವಾದ ಕೆರೆಗೆ ಪೈಪ್ ಲೈನ್ ಮುಖಾಂತರ ನೀರು ತುಂಬಿಸಿ ಶಾಸ್ವತ ನೀರಿನ ಸಮಸ್ಯೆ ಬಗೆ ಹರಿಸಬೇಕು. ತಕ್ಷಣ ಈ ಜ್ವಲಂತ ಸಮಸ್ಯೆಯನ್ನು ನಿವಾರಿಸಿ ಗ್ರಾಮಸ್ಥರಿಗೆ ನೀರಿನ ಅನುಕೂಲ ಮಾಡಿಕೊಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸುಭಾಸಗೌಡ ಪಾಟೀಲ ಮಾತನಾಡಿ, ನೀರಿನ ಸಮಸ್ಯೆಗಾಗಿ ತಕ್ಷಣ ಕ್ರಮವಹಿಸಿ ಜೀವಗಳಿಗೆ ನೀರಿನ ದಾಹ ತನ್ನಿಸಬೇಕೆಂದರು. ನಮ್ಮ ಊರಲ್ಲಿ ಕೆರೆ ನೀರ್ಮಾಣವಾಗಿ 3 ವರ್ಷ ಗತಿಸಿವೆ ಆದರೂ ನಮಗೆ ನೀರಿನ ಒಂದು ಬೊಗಸೆ ಸಿಗುತ್ತಿಲ್ಲ. ಹೊಲಗಳಿಗೆ ನೀರು ಬೇಕಾಗಿಲ್ಲ. ಕುಡಿಯುವ ನೀರು ನೀಡಬೇಕು. ನಮ್ಮ ಭಾಗದಲ್ಲಿಯೇ ಕೆನಾಲ್ ಹೋದರು ನಮಗೆ ನೀರಿನ ತೊಂದರೆ ಇದೇ ತಕ್ಷಣ ಇಲ್ಲಿಯ ಸಮಸ್ಯೆ ನೀಗಿಸಬೇಕೆಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ವಿಠ್ಠಲ ಭಜಂತ್ರಿ, ಗ್ರಾ. ಪಂ. ಸದಸ್ಯರುಗಳಾದ ಮಾಸಿದ ಪೂಜಾರಿ, ಭೀಮರಾವ್ ಶಿಂದೆ, ಪುಂಡಲೀಕ ಇಚ್ಚೂರ, ಬಂದು ಶಿಂದೆ, ರವಿಕುಮಾರ ಭವಾನಿಮಠ, ಗಿರಿಮಲ್ಲಗೌಡ ಪಾಟೀಲ, ದತ್ತು ಕಾಂಬಳೆ, ಮಾಳಪ್ಪ ಹಿಪ್ಪರಗಿ, ರಫೀಕ ಮುಲ್ಲಾ ಮುಂತಾದವರು ಇದ್ದರು.

ವರದಿ : ಅಜೀಜ ಪಠಾಣ.

error: Content is protected !!