ಮಡಸನಾಳ ಗ್ರಾಮದಲ್ಲಿ ನೀರಿಗಾಗಿ ಪರದಾಟ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ವಿಜಯಪುರ ತಾಲೂಕಿನ ಮಡಸನಾಳ ಗ್ರಾಮದಲ್ಲಿ ದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ-ಸತೀಶ ಪಾಟೀಲ ರೈತ ಹೋರಾಟಗಾರ,
ನಮ್ಮ ಭಾಗದ ಶಾಸಕರು ಮಂತ್ರಿಗಳು ಇದ್ದಾರೋ ಇಲ್ಲವೋ ಗೊತ್ತಿಲ್ಲ, ನಮ್ಮ ಮಡಸನಾಳ ಗ್ರಾಮದಲ್ಲಿ ಮತ್ತು ಹತ್ತಿರದ 20 ವಸತಿಗಳ ಸಾರ್ವಜನಿಕರು ಸೈಕಲ್ ಮತ್ತು ಮೋಟರ್ ಸೈಕಲ್‍ಗಳ ಮೇಲೆ ಬೆಳಗಿನ ಜಾವ , ಮಧ್ಯಾನ್ ಮತ್ತು ತಡ ರಾತ್ರಿಜನರು ಕೊಡ ಹಿಡಿದುಕೊಂಡು ನೀರಿಗಾಗಿ ಓಡಾಡುತ್ತ ಪರಿತಪಿಸುತ್ತಿದ್ದಾರೆ.

ಈ ಕುರಿತು ರಸ್ತಾ ರೋಕೊ, ಪ್ರತಿಭಟನೆಗಳು ನಡೆಯುತ್ತಿವೆ. ಇಷ್ಟು ಇದ್ದಾಗಲೂ ಶಾಸಕರು, ಮಂತ್ರಿಗಳು ಮತ್ತು ಜಿಲ್ಲಾಡಳಿತ ಸುಖಾ ಸುಮ್ಮನೆ ಜಿಲ್ಲಾದ್ಯಂತ ಸಾಕಾಗುವಷ್ಟು ನೀರಿನ ಸಂಗ್ರಹವಿದೆಯೆಂದು ಹೇಳಿಕೆ ನೀಡುತ್ತಿದ್ದಾರೆ ಆದರೆ ಸರಬರಾಜು ಏಕೆ ಮಾಡುತ್ತಿಲ್ಲ ಅಂತ ಕೇಳಿದರೆ ಒಬ್ಬರ್ ಮೇಲೆ ಒಬ್ಬರು ಜವಾಬ್ದಾರಿ ಹಾಕಿ ಜಾರಿ ಕೊಳ್ಳುತ್ತಿದ್ದಾರೆ ಆದರೆ ಸರ್ಕಾರ ಮಧ್ಯಸ್ಥಿಕೆ ವಹಿಸಿದರೆ ಲಿಫ್ಟ್ ಮಾಡಿ ನೀರು ಪೂರೈಕೆ ಮಾಡಲು ಕ್ಯಾನಾಲ್ ದಿಂದ ಕೆರೆಗೆ 2km ಅಂತರವಿದ್ದು ಅದಕ್ಕೆ ಪೈಪಲೈನ್ ಮಾಡಿದರೆ ಶಾಶ್ವತ ಪರಿಹಾರ ಆಗುವುದು ಜೊತೆಗೆ ಹತ್ತಿರದ 20 ವಸತಿಗಳಿಗೂ ಸಂಪೂರ್ಣ ನೀರು ಪೂರೈಕೆ ಆಗುತ್ತದೆ ಆದರೆ ಇವಾಗ್ ಸದ್ಯದ ನೀರಿನ ಪರಿಸ್ಥಿತಿ ಮುಂದೆ ಗಂಭಿರವಾಗಬಹುದೆಂಬ ಲೆಕ್ಕಾಚಾರ ಹಾಕುವಲ್ಲಿ ನಿರ್ಲಕ್ಷ ತೋರಿದ್ದಾರೆ.

ಇಂತಹ ಭೀಕರ ನೀರಿನ ಪರಿಸ್ಥಿತಿ ಇದ್ದಾಗ ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹಾರಾಷ್ಟ್ರದ ಹಲವು ಹಳ್ಳಿಗಳಿಗೆ ನೀರು ಪೈಪಲೈನ್ ಮುಖಾಂತರ ಹರಿದು ಹೋಗಲು ಸಹಕರಿಸಿ ನಮ್ಮ ಜನತೆಗೆ ಸಂಕಷ್ಟಕ್ಕೆ ನೂಕಿದ್ದೀರಿ ಇದನ್ನು ಜನರು ಸಹಿಸುವುದಿಲ್ಲ. ಜನರು ಆಕ್ರೋಶಕ್ಕೆ ಏಳುವ ಮೊದಲು ಸೂಕ್ತ ನೀರಿನ ಸರಬರಾಜು ಮಾಡಿ ನಿಮ್ಮ ಜವಾಬ್ದಾರಿಗೆ ಗೌರವ ತಂದುಕೊಳ್ಳಿರಿ.
ಜಿಲ್ಲಾ ಆಡಳಿತ ಇದ್ದ ಪರಿಸ್ಥಿತಿಯನ್ನು ಜನತೆಗೆ ತಿಳಿಸಬೇಕು. ಇಂದು ನಾಳೆ ಅಂತ ಕುಂಟು ನೆಪ ಹೇಳಬಾರದು. ಜಿಲ್ಲಾಡಳಿತ ಜನರಿಗೆ ನೀರಿನ ಕುರಿತು ಜನರ ಜೊತೆ ಚೆಲ್ಲಾಟ ಆಡಬಾರದು , ಇದೇ ಸ್ಥಿತಿ ಮುಂದುವರಿದಲ್ಲಿ ಪಕ್ಷಾತೀತವಾಗಿ ಅನೇಕ ಸಂಘಟನೆಗಳು ಸೇರಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ.

ವರದಿ: D. P. ಮನಗೂಳಿ
ಜೆಕೆ ನ್ಯೂಸ್ ಕನ್ನಡ
ವಿಜಯಪುರ

error: Content is protected !!