ಸಮಸ್ತ ಮಾದಿಗ ಸಮುದಾಯದ ಭವಿಷ್ಯದ ಮತ್ತು ಆಸ್ತಿತ್ವದ ಹಿತದೃಷ್ಟಿಯಿಂದ ರಾಜ್ಯದ ಸಮಸ್ತ ಮಾದಿಗ ಸಮುದಾಯಕ್ಕೆ ಮನವಿ ಮಾಡಿಕೊಳ್ಳುವುದೆಂದರೆ ಒಳ ಮೀಸಲಾತಿ ಜಾರಿಗಾಗಿ ನಡೆಯುವ ಪರಿಶಿಷ್ಟ ಜಾತಿಗಳ ಜಾತಿವಾರು ಜನಗಣತಿಯಲ್ಲಿ ಈ ಕೆಳಗಿನ ಪದಗಳ ಜಾತಿ ಹೆಸರು ಯಾವುದೇ ಕಾರಣಕ್ಕೂ ಬರಸಬೇಡಿ ಅವುಗಳು ಯಾವುವೆಂದರೆ ಮಾತಂಗ, ಹರಿಜನ, ಎಡಗೈ ಆದಿ ಜಾಂಬವ, ಚಮ್ಮಾರ ,ಮಾದಾರ ಮಾಂಗ ಮತ್ತು ಮಾಂಗವಾಡಿ ಇವುಗಳ ಬದಲಾಗಿ ನಮ್ಮ ಮೂಲ ಜಾತಿಯಾದ *ಮಾದಿಗ* ಎಂದು ಬರಿಸಬೇಕೆಂದು ಕಲ್ಬುರ್ಗಿ ಜಿಲ್ಲೆಯ ಡಾ. ಬಾಬು ಜಗಜೀವನ್ ರಾಮ್ ಹೋರಾಟ ಮತ್ತು ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷರಾದ ರಾಜು ಎಸ್. ಕಟ್ಟಿಮನಿ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು.
