ಹುಮನಾಬಾದ : ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಹುಮನಾಬಾದ ತಾಲೂಕಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸಂಘದ ಸಂಸ್ಥಾಪಕರ ಆದೇಶದ ಮೇರೆಗೆ ರಾಜ್ಯ ಸಂಘನಾ ಕಾರ್ಯದರ್ಶಿಗಳಾದ ಶ್ರೀ ಸುಂದರ ರಾಜಪ್ಪ ಹಲಗಿ ಹಾಗೂ ಜಿಲ್ಲಾಧ್ಯಕ್ಷರಾದ ಮೋಹನ ಮಾನೆ ಗಾದಗಿ ಅವರ ನೇತೃತ್ವದಲ್ಲಿ ನೇಮಕ ಮಾಡಲಾಗಿದೆ.ತಾಲೂಕಾಧ್ಯಕ್ಷರಾಗಿ ಶ್ರೀ ಭೀಮಶಾ ಮೇಲಕೇರಿ ಗೌರವಧ್ಯಕ್ಷರಾಗಿ ಕಲ್ಲಪ್ಪಾ ಹುಮನಾಬಾದೆ,ಉಪಾಧ್ಯಕ್ಷರಾಗಿ ಎಮ್. ಡಿ. ಸಾಜೀದ್,ಪ್ರಧಾನ ಕಾರ್ಯದರ್ಶಿಯಾಗಿ ಗಣಪತಿ ಸದಲಾಪುರೆ,ಸಹ ಕಾರ್ಯದರ್ಶಿಯಾಗಿ ಮಹೇಶ ಉಡಬಾಳೆ, ಖಜಾಂಚಿಯಾಗಿ ಬಸವರಾಜ ಹಾರಕೂಡ, ಸದಸ್ಯರಾಗಿ ಕೊಂಡಿಬಾ ಡೋಕ್ರೆ, ಮಾರುತಿ ಶೇರಿಕಾರ,ವಿದ್ಯಾಸಾಗರ ಹೊಸಳೆಕರ, ಶಿವಕುಮಾರ ಮಿತ್ರ, ಜಟೇಪ್ಪಾ ಹಲಗೆ, ಗುಂಡಪ್ಪಾ ಉಪ್ಪಾರ, ಮಾಳಗೊಂಡ ಇರಿಕರ್, ಭೀಮಣ್ಣ ಮಾಸಿಮಾಡೆ, ವೀರಶೆಟ್ಟಿ ಮರಕಲ್,ರಾಜಕುಮಾರ ಮೇತ್ರೆ, ಈಶ್ವರ ಹಣಮಂತಪ್ಪಾ, ರವೀಂದ್ರ ಉಪ್ಪಾಳೆ, ವೀರಶೆಟ್ಟಿ ಶೇರಿಕಾರ ಅವರನ್ನು ನೇಮಕ ಮಾಡಲಾಗಿದೆ ಎಂದು ಪತ್ರಿಕೆಯಲ್ಲಿ ತಿಳಿಸಿದ್ದಾರೆ. ಹುಮನಾಬಾದ ತಾಲೂಕಾಧ್ಯಕ್ಷರಾಗಿ ನನ್ನನ್ನು ನೇಮಕ ಮಾಡಿದ ಎಲ್ಲರಿಗೂ ನನ್ನ ಹೃತ್ಪೂರ್ವಕವಾದ ಧನ್ಯವಾದಗಳನ್ನು ತಿಳಿಸುತ್ತೇನೆ.ಮತ್ತು ಸಂಘದ ಹಿತದೃಷ್ಟಿಯನ್ನು ಕಾಯ್ದುಕೊಂಡು ಅಭಿವೃದ್ಧಿಯ ಪಥದಲ್ಲಿ ನಡೆಸುತ್ತಾ ನಾನು ಸೇವೆ ಮಾಡುತ್ತೇನೆಂದು ಭರವಸೆ ಮಾತನ್ನು ಕೊಡುತ್ತೇನೆಂದು , ಭೀಮಶಾ ಮೇಲಕೇರಿ ಪತ್ರಿಕೆಗೆ ತಿಳಿಸಿದ್ದಾರೆ.