ಸಿದ್ದಾಪುರ ಪೊಲೀಸ್ ಠಾಣೆ:
20 ದ್ವಿ-ಚಕ್ರ ವಾಹನಗಳು ಮತ್ತು 1 ಆಟೋರಿಕ್ಷಾ ವಶ, ಮೌಲ್ಯ ₹ 18 ಲಕ್ಷ,
ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಜಯನಗರ 2ನೇ ಬ್ಲಾಕ್ನ ಆರ್.ವಿ. ಟೀಚರ್ಸ್ ಕಾಲೇಜ್ ಬಳಿ ವಾಸವಿರುವ ಪಿರ್ಯಾದುದಾರರು, ದಿನಾಂಕ:26/08/2025 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿತ್ಯಾದುದಾರರು ದಿನಾಂಕ:25/08/2025 ರಂದು ರಾತ್ರಿ ಮನೆಯ ಮುಂಭಾಗ ದ್ವಿ-ಚಕ್ರ ವಾಹನವನ್ನು ಲಾಕ್ ಮಾಡಿ ನಿಲ್ಲಿಸಿ, ಮನೆಗೆ ಹೋಗಿರುತ್ತಾರೆ. ಮರುದಿನ ಬೆಳಿಗ್ಗೆ ನೋಡಲಾಗಿ, ದ್ವಿ-ಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದ್ವಿ-ಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:29/08/2025 ರಂದು ಠಾಣಾ ಸರಹದ್ದಿನ ಸೋಮೇಶ್ವರ ನಗರದ ಟ್ಯಾಂಕ್ ಗಾರ್ಡನ್ ಬಳಿ ಪ್ರಕರಣದಲ್ಲಿ ಕಳುವಾಗಿದ್ದ ದ್ವಿ-ಚಕ್ರ ವಾಹನ ಸಮೇತ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ದ್ವಿ-ಚಕ್ರವಾಹನವನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದ್ವಿ-ಚಕ್ರ ವಾಹನ ಮತ್ತು ಆಟೋರಿಕ್ಷಾವೊಂದನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ: 30/08/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 08 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಕಳವು ಮಾಡಿದ ಆಟೋರಿಕ್ಷಾ ಮತ್ತು ದ್ವಿ-ಚಕ್ರ ವಾಹನಗಳನ್ನು ಠಾಣಾ ಸರಹದ್ದಿನ ಗುಂಡಪ್ಪ ಸ್ಲಂ ಮತ್ತು ಪಂಪ್ ಹೌಸ್ ಹಾಗೂ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ಸರಹದ್ದಿನ ವಿನಾಯಕ ನಗರದ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿರುತ್ತಾನೆ.
ಆರೋಪಿಯು ನೀಡಿದ ಮಾಹಿತಿ ಮೇರೆಗೆ ದಿನಾಂಕ:01/09/2025 ರಿಂದ ದಿನಾಂಕ:05/09/2025 ರ ಅವಧಿಯಲ್ಲಿ ಒಟ್ಟು 19 ದ್ವಿ-ಚಕ್ರ ವಾಹನಗಳು ಮತ್ತು 01 ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣದ ಆರೋಪಿಯ ಬಂಧನದಿಂದ 20 ದ್ವಿ-ಚಕ್ರ ವಾಹನಗಳು ಮತ್ತು 01 ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ * 18.00,000/-(ಹದಿನೆಂಟು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಯ ಬಂಧನದಿಂದ 1) ಸಿದ್ದಾಪುರ ಪೊಲೀಸ್ ಠಾಣೆಯ- 02 ದ್ವಿ-ಚಕ್ರವಾಹನ ಕಳವು ಪ್ರಕರಣಗಳು 2) ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ-03 ದ್ವಿ-ಚಕ್ರವಾಹನ ಕಳವು ಪ್ರಕರಣಗಳು 3) ಶೇಷಾದ್ರಿಪುರಂ ಪೊಲೀಸ್ ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ 4) ಆಡುಗೋಡಿ ಪೊಲೀಸ್ ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ 5) ಕೆ.ಆರ್.ಪುರಂ ಪೊಲೀಸ್ ಠಾಣೆಯ-03 ದ್ವಿ-ಚಕ್ರವಾಹನ ಕಳವು ಪ್ರಕರಣಗಳು 6) ಕೆಂಗೇರಿ ಪೊಲೀಸ್ ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ 7) ಕುಂಬಳಗೋಡು ಪೊಲೀಸ್ ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ 8) ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ 9) ಅಶೋಕನಗರ ಪೊಲೀಸ್ ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ 10) ತಿಲಕನಗರ ಪೊಲೀಸ್ ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ 11) ಬ್ಯಾಟರಾಯನಪುರ ಪೊಲೀಸ್ ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ 12) ಚಾಮರಾಜಪೇಟೆ ಪೊಲೀಸ್ ಠಾಣೆಯ-01 ದ್ವಿ-ಚಕ್ರವಾಹನ ಕಳವು ಪ್ರಕರಣ 13) ಜಯನಗರ ಪೊಲೀಸ್ ಠಾಣೆಯ-01 ಆಟೋ ರಿಕ್ಷಾ ಕಳವು ಪ್ರಕರಣ 14) ಪೀಣ್ಯ ಪೊಲೀಸ್ ಠಾಣೆಯ 01 ದ್ವಿ-ಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 18 ದ್ವಿ-ಚಕ್ರ ವಾಹನಗಳ ಕಳವು ಪ್ರಕರಣಗಳು ಮತ್ತು 01 ಆಟೋರಿಕ್ಷಾ ಕಳವು ಪ್ರಕರಣ ಪತ್ತೆಯಾಗಿರುತ್ತವೆ. ಉಳಿದ 02 ದ್ವಿ-ಚಕ್ರ ವಾಹನಗಳ ವಾರಸುದಾರರು ಪತ್ತೆಯಾಗಬೇಕಾಗಿದ್ದು, ಪತ್ತೆಕಾರ್ಯ ಮುಂದುವರೆದಿದೆ. ತನಿಖೆ ಪ್ರಗತಿಯಲ್ಲಿದೆ.
ದಿನಾಂಕ:06/09/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಚರಣೆಯನ್ನು ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಲೋಕೇಶ್ ಭರಮಪ್ಪ ಜಗಲಾಸರ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ನಾರಾಯಣಸ್ವಾಮಿ. ವಿ ರವರ ನೇತೃತ್ವದಲ್ಲಿ, ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸೆಕ್ಟರ್ ಮೋಹನ್.ಡಿ.ಪಟೇಲ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್