ವಿಕಲಚೇತನರಿಗೆ ಸಾಮಾಜಿಕ ನ್ಯಾಯ ಮರೀಚಿಕೆ

ಬೆಂಗಳೂರು : ಆಡಳಿತ ಶಾಹಿಯ ಮೀಸೆ ತಿರುವುವ ಕರಾಳ ಮುಖವನ್ನು ಎತ್ತಿ ಹಿಡಿದಿದೆ ಎಂದು ಸ್ಪಷ್ಟವಾಗಿ ಹೇಳಬಲ್ಲೆ. ಕಳೆದ 40 ವರ್ಷಗಳಿಂದ ವಿಕಲಚೇತನರ ನ್ಯಾಯಯುತ ಸೌಲಭ್ಯ ಮತ್ತು ಹಕ್ಕುಗಳಿಗಾಗಿ ವಿವಿಧ ವೇದಿಕೆಗಳಲ್ಲಿ ಹೋರಾಡುತ್ತಿರುವ ನನಗೆ ಎದುರಾಗಿರುವ ಅಡ್ಡಿ ಆತಂಕಗಳು ಒಂದೆರಡು ಅಲ್ಲ ಹಾಗೂ ಅವುಗಳನ್ನು ವಿವರಿಸಲು
ಸಮಯ ಹಾಗೂ ಮಾನಸಿಕ ಸ್ಥೈರ್ಯ ಕುಸಿಯುವ ಕಾರಣಗಳಿಂದ ಬರೆಯಲು ಸಾಧ್ಯವಾಗುತ್ತಿಲ್ಲ .

ಭಾರತೀಯ ರೈಲ್ವೆಯ ವಿಕಲಚೇತನರ ರಿಯಾಯಿತಿ ಪಾಸಿನಲ್ಲಿರುವ ತಾರತಮ್ಯದ ಬಗ್ಗೆ ಅಂಗವಿಕಲರ ಮುಖ್ಯ ಆಯುಕ್ತರ ನ್ಯಾಯಾಲದಲ್ಲಿ ದಾವೆ ಹೂಡಿ ಕೋರ್ಟ್ ಆದೇಶದ ಮೂಲಕ ಎಲ್ಲಾ ವಿಕಲಚೇತನರಿಗೆ ರಿಯಾಯಿತಿ ಪ್ರಯಾಣದ ಪಾಸು ವಿತರಿಸಬೇಕೆಂದು ಆದೇಶ ಹೊರಡಿಸಿದ್ದರೂ ಕೂಡಾ ರೈಲ್ವೆ ಇಲಾಖೆ ಇಲ್ಲದ ಸಬೂಬುಗಳನ್ನು ಹೇಳಿ ವಿಕಲಚೇತನರಿಗೆ ಸಹಾನುಭೂತಿ ತೋರಿಸುವುದು ಬಿಟ್ಟು ಕಾನೂನು ಸಂಘರ್ಷಕ್ಕೆ ಹೆದ್ದಾರಿ ರಚಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೂ ಇದಕ್ಕೆ ಹೊರತಾಗಿಲ್ಲ ಕಾರಣ ಅಂಗವಿಕಲರ ರಾಜ್ಯ ಆಯುಕ್ತರಿಂದ ನೋಟಿಸ್ ಮತ್ತು ಸೂಚನೆಗೂ ರಾಜ್ಯ ಸರಕಾರ ಬಗ್ಗದೆ ಹಣಕಾಸು ಅಡಚಣೆಯ ನೆಪ ಹೇಳಿ ಜಾರಿಕೊಳ್ಳುತ್ತುತ್ತಿದೆಯಲ್ಲದೆ ವಿಕಲಚೇತನರ ನ್ಯಾಯಾಲಗಳು ಸರಕಾರಗಳಿಂದ ನೇಮಕಗೊಂಡಿರುವ ಕಾರಣಗಳಿಂದ ಕಾನೂನು ಕ್ರಮಕ್ಕೆ ಹಿಂಜರಿಯುವ ಸ್ಥಿತಿ ಇದೆ.

ಇನ್ನು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ವಿಷಯ ಕೇಳಲೇ ಬೇಡಿ ವಿಕಲಚೇತನರ ವಿಷಯದಲ್ಲಿ ಕಠಿಣ ರೀತಿಯಿಂದ ನಡೆದುಕೊಂಡು ಬ್ಯಾಂಕ್ ಇಂದು ಅವಿದ್ಯಾವಂತರ ತಾಣವಾಗಿ ಪರಿವರ್ತಿತ ಗೊಂಡಿರುವುದು ಇಂದಿನ ವಾಸ್ತವ ಸತ್ಯ.

ಇದಲ್ಲದೆ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಹಲ್ಲಿಲ್ಲದ ಹಾವಿನ ಸ್ಥಿತಿಯನ್ನು ರಾಜ್ಯ ಸರಕಾರವು ನಿರ್ಮಿಸಿರುವುದು ಕೂಡಾ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಕುಸಿಯಲು ಯತ್ನಿಸಿರುವ ವಾಸ್ತವ ಸತ್ಯವೂ ನಮ್ಮ ಬತ್ತಳಿಕೆಯಲ್ಲಿದೆ.

ಕೆಲವೊಂದು ಸಂದರ್ಭಗಳಲ್ಲಿ ವಿಕಲಚೇತನರ ನ್ಯಾಯಾಲವೇ ಇಂತಹ ಸಮಸ್ಯೆಗಳ ವಿಚಾರಣೆಗೆ ಸರಕಾರಗಳ ಧೋರಣೆಗಳಿಂದ ಬೇಸತ್ತು ದೂರುಗಳ ವಿಚಾರಣೆ ನಡೆಸಲು ಹಿಂಜರಿಯುತ್ತಿರುವ ಅನುಭವವೂ ನಮಗಾಗುತ್ತಿವೆ.

ಇಂತಹ ಅಧಃ ಪತನಗಳಿಗೆ ಕಾಲವೇ ಉತ್ತರಿಸುತ್ತದೆ ಎಂಬ ಆಶಾಭಾವನೆ ಮಾತ್ರ ವಿಕಲಚೇತನರ ಓಯಸಿಸ್ ಆಗಿರಿರುವುದು ಒಂದು ಸಾಮಾಜಿಕ ದುರಂತವಾಗಿದೆ ಎಂದು ಶ್ರೀ ಕೊಡಕ್ಕಲ್ ಶಿವಪ್ರಸಾದ್, ಸಂಸ್ಥಾಪಕ ಅಧ್ಯಕ್ಷರು, ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಸೋಸಿಯೇಷನ್, ಶಿವಮೊಗ್ಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

error: Content is protected !!