ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬೈಚಬಾಳ್
ಗ್ರಾಮ ಪಂಚಾಯತಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮನರೇಗಾದಡಿಯಲ್ಲಿ ನಮ್ಮ ಶಾಲೆ ನಮ್ಮ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹುಣಸಗಿ ತಾಲೂಕು ಪಂಚಾಯತ್ ಕಾರ್ಯನಿರ್ವಕ ಅಧಿಕಾರಿಯಾದ ಬಸಣ್ಣ ನಾಯಕ ಅವರು ಅಡಿಗಲ್ಲು ಪೂಜೆ ಮಾಡಿ ಕಾಂಪೌಂಡ್ ಕಾಮಗಾರಿಗೆ ಚಾಲನೆ ನೀಡಿದರು
ನಂತರ ಶಾಲೆಯ ಶೌಚಾಲಯ ಕಾಮಗಾರಿಯನ್ನು ಪರಿಶೀಲಿಸಿ ನಿಗದಿತ ಅವಧಿಯಲ್ಲಿ ಉತ್ತಮವಾದ ರೀತಿಯಲ್ಲಿ ಕಾಮಗಾರಿಯನ್ನು ನಿರ್ವಹಿಸಲು ಸೂಚಿಸಿದರು ಹಾಗೂ ಬಿಸಿಯೂಟದ ಅಡುಗೆ ಕೋಣೆಗೆ ಭೇಟಿ ನೀಡಿ ಉತ್ತಮವಾದ ಮತ್ತು ಪೌಷ್ಟಿಕವಾದ ಆಹಾರವನ್ನು ನೀಡಲು ಮತ್ತು ಅಡುಗೆ ಕೋಣೆಯನ್ನು ಸ್ವಚ್ಛವಾಗಿ ಇಡಲು ತಿಳಿಸಿದರು
ಇದೇ ಸಂದರ್ಭದಲ್ಲಿ
ಸಹಾಯಕ ಯೋಜನಾಧಿಕಾರಿಗಳಾದ ಶಿವಕುಮಾರ್ ಚೌದ್ರಿ TAE ಕುಮಾರ್ ಕೌದಿ TC ಸುನಿಲ್ ಕುಮಾರ್ PDO ಸಂಜೀವ ರೆಡ್ಡಿ BFT ಗೋವಿಂದಪ್ಪ ಮತ್ತು ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ : ರಸೂಲ್ ಬೆನ್ನೂರ್