ಗಬ್ಬೂರು: ನರೇಗಾ ಕೂಲಿಕಾರರ ಹಣ ಜಮಾಕ್ಕಾಗಿ ಜೂನ್ 5 ರಂದು ಧರಣಿ

ದೇವದುರ್ಗ : ಮೇ, 30, ತಾಲ್ಲೂಕಿನ ಗಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಹಿರೇ ಗುಡ್ಡದಲ್ಲಿ ನರೇಗಾ ಕಾಮಗಾರಿಯಲ್ಲಿ ಕೂಲಿಕಾರರ ಹಣ ಜಮಾ ಆಗದೆ ಝೀರೋ ಆಗಿದ್ದು ಕೆಲಸ ಮಾಡಿದರೂ ಸಹ ಹಣ ಪಾವತಿ ಮಾಡದೆ ಜೀರೋ ಮಾಡಿರುವುದರಿಂದ ತಾಲೂಕ್ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ದೇವದುರ್ಗ ಇವರಿಗೆ ಮನವಿ ಸಲ್ಲಿಸಿ ಗಬ್ಬೂರು ಗ್ರಾಮ ಪಂಚಾಯಿತಿ ಮುಂದೆ ಜೂನ್ 5 ರಂದು ಕೂಲಿಕಾರ ಒಡಗೋಡಿ ಧರಣಿ ಮಾಡಲಾಗುವುದು ಎಂದು ದಲಿತ ಮುಖಂಡರಾದ ಬಸವರಾಜ್ ಸಿಂಗ್ರಿ ಅವರು ತಿಳಿಸಿದರು.
ಗಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಹಿರೇ ಗುಡ್ಡದಲ್ಲಿ ನರೇಗಾ ಕಾಮಗಾರಿಯು ಏಪ್ರಿಲ್ 24.2025 ರಿಂದ ಏಪ್ರಿಲ್ 30.2025 ರವರೆಗೆ ಟ್ರಂಚ್ ನಿರ್ಮಾಣ ಮಾಡಿದ್ದು, ಇದುವರೆಗೂ ಇವರ ಖಾತೆಗೆ ಯಾವುದೇ ರೀತಿಯ ಹಣ ಜಮಾ ಆಗಿರುವುದಿಲ್ಲ ಹಾಗೂ ಕೂಲಿಯನ್ನು ಜೀರೋ ಮಾಡಿದ್ದು ಇದರ ಭತ್ಯೆಯನ್ನು ತಾವುಗಳು ತುಂಬಿಕೊಡಬೇಕು ಮತ್ತು ಸೇವ್ ಡೇಟ್ ಅನ್ನು ನಿಷ್ಕಾಳಜಿ ಮಾಡಿರುವಂತಹ ಅಧಿಕಾರಿಗಳನ್ನು ಅಮಾನತು ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಅಗತ್ಯ ಕ್ರಮ ಕೈಗೊಂಡು… ಬಡ ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸುವಕೊಡಬೇಕು
ಒಂದು ವೇಳೆ ಇದನ್ನೂ ಕೂಡ ನಿಷ್ಕಾಳಜಿ ಮಾಡಿದರೆ ಗಬ್ಬೂರು ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ಜೂನ್ 5 ಗುರುವಾರದಂದು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡುತ್ತಿದ್ದೇವೆ.
ಅಲ್ಲದೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ತಿರುಮಲ ರೆಡ್ಡಿ ಅವರು ಗ್ರಾಮದಲ್ಲಿ ಕಾಮಗಾರಿ ನಡೆದಿದ್ದು ಕೆಲ ತಾಂತ್ರಿಕ ದೋಷದಿಂದಾಗಿ ಈ ಸಮಸ್ಯೆ ಉಂಟಾಗಿದೆ ಇದರ ಬಗ್ಗೆ ತಾಂತ್ರಿಕ ಸಂಯೋಜಕ ರೊಂದಿಗೆ ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು ಜೊತೆಗೆ ಕೂಲಿಕಾರರ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆ ಮುಖಂಡರಾದ ಬಸವರಾಜ್ ಜಗ್ಲಿ, ರಾಜಾಹುಲಿ ಸಿಂಗ್ರಿ ಇತರರು ಭಾಗಿಯಾಗಿದ್ದರು.

error: Content is protected !!