ಯಮಕಣ ಮರಡಿ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಲ್ಲಿನ ಮಸರಗುಪ್ಪಿ, ಗವನಾಳ, ಗೋಟುರ ಹಾಗೂ ಕೋಚರಿ ಗ್ರಾಮಗಳಲ್ಲಿ ಅಂದಾಜು 1.44 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 7 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ, ಮಾತನಾಡಲಾಯಿತು.
ಕಾಮಗಾರಿಗಳ ವಿವರ.
1. ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಿ.ಎಚ್.ಪಿ.ಎಸ್ ಮಸರಗುಪ್ಪಿ ಉರ್ದು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ನಿರ್ಮಾಣ.
ವೆಚ್ಚ ರೂ. 36.00 ಲಕ್ಷ.
2. ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆ.ಎಚ್.ಪಿ.ಎಸ್ ಗವನಾಳ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ನಿರ್ಮಾಣ
ವೆಚ್ಚ: ರೂ. 36.00 ಲಕ್ಷ.
3. ಬಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆ.ಎಚ್.ಪಿ.ಎಸ್ ಗೋಟುರ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ నిರ್ಮಾಣ
ವೆಚ್ಚ: ರೂ. 18.00 ಲಕ್ಷ.
4.ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆ.ಎಚ್.ಪಿ.ಎಸ್ ಕೋಚರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ನಿರ್ಮಾಣ.
ವೆಚ್ಚ: ರೂ.18.00 ಲಕ್ಷ.
5. ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆ.ಎಸ್.ಪಿ.ಎಸ್ ಕೋಚರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ನಿರ್ಮಾಣ
ವೆಚ್ಚ: ರೂ. 36.00 ಲಕ್ಷ.
ಈ ಸಂದರ್ಭದಲ್ಲಿ ಈ ವೇಳೆ ಗ್ರಾಮದ ಮುಖಂಡರು, ಗ್ರಾ.ಪಂ. ಸದಸ್ಯರು, ಎಸ್ ಡಿಎಂಸಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ