ಪುರಸಭೆ ವ್ಯಾಪ್ತಿಯಲ್ಲಿ ಹೈಮಾಸ್ಕ ವಿದ್ಯುತ್‌ ದೀಪ ಅಳವಡಿಕೆ

ರಾಮದುರ್ಗ: ಪಟ್ಟಣದ ಪುರಸಭೆ ವ್ಯಾಪ್ತಿಯ 2ನೇ ವಾರ್ಡ್ ನ ರಾಧಾಪೂರ ಪೇಟೆಯ ಶ್ರೀದುರ್ಗಾದೇವಿ ದೇವಸ್ಥಾನದ ಬಳಿ ಗುರುವಾರ ಪುರಸಭೆ ವತಿಯಿಂದ ಹೈಮಾಸ್ಟ್ ವಿದ್ಯುತ್ ಕಂಬ ಅಳವಡಿಸಿ ದೀಪವನ್ನು ಬೆಳಗಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಉಪಾಧ್ಯಕ್ಷೆ ಸರಿತಾ ಧೂತ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಬೆಂಬಳಗಿ, ಸದಸ್ಯ ನಾಗರಾಜ ಕಟ್ಟಿಮನಿ, ಪುರಸಭೆ ಮುಖ್ಯಾಧಿಖಾರಿ ಈರಣ್ಣ ಗುಡದಾರಿ, ಚಂದನ ಪಾಟೀಲ, ಅಭಿಯಂತರ ಮಹಾತಗೌಡ ಪಾಟೀಲ, ಹಿರಿಯರಾದ ವಿಷ್ಣು ಕೊಳದೂರ, ನಾರಾಯಣ ಹೂಲಿ, ವಿಷ್ಣು ಸೂಳಿಭಾಂವಿ, ರಾಜು ಕೊಳದೂರ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ : Md ಸೋಹಿಲ ಭೈರಕದಾರ ಜೆಕೆ ನ್ಯೂಸ ಕನ್ನಡ ರಾಮದುರ್ಗ

error: Content is protected !!