ಇಂದು 20-06-2025 ರಂದು ವಿಜಯಪುರ ನಾ ಈ ಭಾಗಗಳಲ್ಲಿ 03.00 ಘಂಟೆ ಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ದಿನಾಂಕ: 20-06-2025 ರಂದು ಬೆಳಗ್ಗೆ 9.00 ರಿಂದ 15.00 ಘಂಟೆಯವರಿಗೆ 110ಕೆ ಬೇಗಳ ಮೊದಲನೇ ತ್ರೈಮಾಸಿಕ ನಿರ್ವಾಹಣಾ ಕಾರ್ಯ ಕೈಗೊಳ್ಳುವುದರಿಂದ, 110/11 ಕೆಡ್ಡಿ ವಿ.ವಿ ಕೇಂದ್ರ ಕೆಐಎಡಿಬಿ, ಭೂತನಾಳ, ಜುಮನಾಳ, ವಿಜಯಪುರ ಸಿಟಿ, ಮತ್ತು 33/11 ಕೆವಿ ಹೊನ್ನಬಗಿ, ನಾಗರಾಣ, ತಿಡಗುಂದಿ ಹಾಗೂ 220/110 ಕೆವಿ ಸ್ವೀಕರಣಾ ಕೇಂದ್ರ ವಿಜಯಪುರದಿಂದ ಹೊರಹೋಗುವ ಎಲ್ಲ 11 ಕೆವಿ ವಿದ್ಯುತ್ ಮಾರ್ಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದು.

ಆದ ಕಾರಣ, ಗ್ರಾಹಕರು ಹೆಸ್ಕಾಂ ಜೊತೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಅಭಿಯಂತರು (ವಿ) ಕಾರ್ಯ ಮತ್ತು ಪಾಲನಾ ವಿಭಾಗ, ಹೆಸ್ಕಾಂ ವಿಜಯಪುರ ಇವರು ಪ್ರಕಟಣೆಯಲ್ಲಿ ವಿನಂತಿ ಮಾಡಿಕೊಂಡಿರುತ್ತಾರೆ.

ವರದಿ : ಅಝಿಜ್ ಪಠಾಣ

error: Content is protected !!