ಕಲಬುರಗಿ ಜಿಲ್ಲೆಯ ಜೆಸ್ಕಾಂ ವ್ಯಾಪ್ತಿಯಲ್ಲಿ ನಿರ್ಮಿಸುವ ಹಲವಾರು ತೋಟದ ಮನೆಗಳಿಗೆ ಜಮೀನಿನಲ್ಲಿ ಹಾಗೂ ಊರಿನಿಂದ ದೂರ ಮತ್ತು ಹೊಲಗಳ ಇರುವಂತಹ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜು ಇಲ್ಲದಿರುವುದರಿಂದ ಅಲ್ಲಿ ವಾಸಿಸುತ್ತಿರುವಂತ ರೈತರಿಗೆ ರೈತನ ಮಕ್ಕಳಿಗೆ ಅನಾನುಕೂಲವೆ ಜಾಸ್ತಿ ಇದ್ದು ವಿಷಜಂತುಗಳಿಂದ, ಕಾಡುಪ್ರಾಣಿಗಳಿಂದ ಮತ್ತು ಮಕ್ಕಳಿಗೆ ವಿದ್ಯಾಭ್ಯಾಸ ಹೀಗೆ ಹಲವಾರು ತೊಂದರೆ ತಾಪತ್ರೆಗಳಾಗುತ್ತಿವೆ. ಈಗಾಗಲೇ ಸರಕಾರ ರೈತರ ಬಗ್ಗೆ ಕಾಳಜಿ ವಹಿಸಿ ಜನೇವರಿಯಿಂದಲೇ ರೈತರಿಗೆ ವಿದ್ಯುತ್ ಕೊಡಬೇಕೆಂದು ಆದೇಶ ಹೊರಡಿಸಿರುತ್ತದೆ.ಆದ ಕಾರಣ ವಿಳಂಬ ಮಾಡುವುದು ಸರಿಯಲ್ಲ ರೈತ ದೇಶದ ಬೆನ್ನೆಲುಬು ರೈತನಿಗೆ ಅನ್ಯಾಯ ಮಾಡಿದರೆ ದೇಶಕ್ಕೆ ಅನ್ಯಾಯ ಮಾಡಿದಂತೆ. ಸ್ವಲ್ಪ ರೈತನೆ ಕಡೆ ಗಮನಹರಿಸಿ ಕೂಡಲೇ ಅಧಿಕಾರಿಗಳನ್ನು ನೇಮಿಸಿ ತೋಟದ ಮನೆಗೆ ಕರೆಂಟ್ ಸಪ್ಲೈ ಮಾಡಿಸಿ, ಕರೆಂಟ್ ಹಾಕಿಸಿ ಕೊಡಬೇಕೆಂದು ಅವಳಿ ತಾಲೂಕುಗಳಾದ ಚಿಂಚೋಳಿ ಮತ್ತು ಕಾಳಗಿ ರೈತರು ಈಗಾಗಲೇ ಸರ್ಕಾರದ ಆದೇಶದಂತೆ ಹಗಲ ಹೊತ್ತಿನಲ್ಲಿ ಏಳು ತಾಸು ತ್ರೀ ಫೇಸ್ ಕರೆಂಟ್ ಕೊಡಲು ಆದೇಶ ನೀಡಿದರು ಸರಿಯಾಗಿ ಎರಡು ತಾಸು ಸಹ ಬರುತ್ತಿಲ್ಲ ವಿಪರ್ಯಾಸ ಒಂದು ಗಾದೆ ಮಾತಿದೆ ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಅಂದಂಗಾಯ್ತು ನಮ್ಮ ರೈತರ ಬಾಳು ಕೂಡಲೇ ಪ್ರತಿ ದಿನಾ ರೈತರಿಗೆ 7 ತಾಸು ಕರೆಂಟ್ ಕೊಡಬೇಕೆಂದು ಆಗ್ರಹಿಸಿ ಮನವಿ ಪತ್ರವನ್ನು ವ್ಯವಸ್ಥಾಪಕ ನಿರ್ದೇಶಕರು ಜೆಸ್ಕಾಂ ಕಲಬುರಗಿ ನೀಡಿದರು.
ಈ ಸಂಧರ್ಭದಲ್ಲಿ ವೀರಣ್ಣ ಗಂಗಾಣಿ
ತಾಲೂಕ ಅಧ್ಯಕ್ಷರು ರೈತ ಸೇನೆ ಹಾಗೂ ರೈತ ಸಂಘ ರೈತ ಮುಖಂಡರುಗಳಾದ ಶಿವರಾಜ ಪಾಟೀಲ. ಸಿದ್ದಯ್ಯ ಸ್ವಾಮಿ. ಶಿವಕುಮಾರ ಕೋಡ್ಲಿ ಹನಮಂತ ರೆಡ್ಡಿ ದೇಶಮುಕ. ಚಂದ್ರಕಾಂತ ಪೆದ್ದಿ. ಸಿರಾಜೋ ದ್ದಿನ್ ಕೋಡ್ಲಿ. ರಮೇಶ್ ಆಡಕಿ. ಇನ್ನು ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್