ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಇಂದು ವಿಕಲಚೇತನ ಮಕ್ಕಳು ಸರ್ಕಾರಿ ಸೌಲಭ್ಯ ಪಡೆಯಲು ಯುಡಿಐಡಿ ಕಾರ್ಡ್ ಕಡ್ಡಾಯ
ಪ್ರತಿ ಮಗುವಿನಲ್ಲಿ ಅದರೆಯಾಗಿರುತಕ್ಕಂತಹ ಪ್ರತಿಭೆಯನ್ನು ಅಡಗಿರುತ್ತದೆ ವಿಕಲಚೇತನರಲ್ಲಿ ವಿಶೇಷವಾಗಿರತಕ್ಕಂತ ಪ್ರತಿಭೆ ಅಡಗಿದು ಹಲವಾರು ಕ್ಷೇತ್ರಗಳಲ್ಲಿ ಸಾಮಾನ್ಯ ಮಕ್ಕಳಿಗೆ ಮೀರಿಸುವ ಸಾಧನೆ ಮಾಡಿರುವುದು ವಿಕಲಚೇತನ ಮಕ್ಕಳು, ವಿಕಲಚೇತನರಿಗೆ ಅವಕಾಶ ನೀಡುವುದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದು ಮುಖ್ಯ ವಾಹಿನಿಗೆ ತರುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ರಾಥೋಡ್ ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಸಮನ್ವಯ ಶಿಕ್ಷಣದ ವಿಭಾಗದಿಂದ ಇಂದು ಕ್ಷೇತ್ರ ಸಂಪನ್ಮೂಲ ಕೇಂದ್ರ ಔರಾದನಲ್ಲಿ ತೀವ್ರ ನ್ಯೂನತೆಗೆ ಒಳಗಾಗಿರುವ ವಿಕಲಚೇತನ ಮಕ್ಕಳಿಗೆ, ಅಗತ್ಯತೆಯ ಸಾಮಗ್ರಿಗಳನ್ನು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಸಾಮಗ್ರಿಗಳನ್ನು ವಿತರಿಸಿದರು.
ಕ್ಷೆತ್ರ ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿಗಳಾದ ಡಾ ಶಾಲಿವಾನ ಉದಗಿರೆ ಪ್ರಸ್ತಾವಿಕ ಮಾತನಾಡಿ ಸಮನ್ವಯ ಶಿಕ್ಷಣದ ಸರ್ಕಾರದ ಯೋಜನೆಗಳು
ಪಾಲಕರು ಮತ್ತು ಶಿಕ್ಷಕರು ಅರಿತುಕೊಂಡು ಅದರ ಪ್ರಯೋಜನ ಪಡೆದುಕೊಳ್ಳಿ , ವಿಕಲಚೇತನ ಮಕ್ಕಳು ಕಡ್ಡಾಯ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೊಂದಿರಬೇಕು, ಎಸ್‌ಟಿಎಸ್‌ನಲ್ಲಿ ವಿಕಲತೆಯ ವಿಧ ನಮೂದು ಮಾಡಿರಬೇಕು, ಆಧಾರ ಕಾರ್ಡ್ ಮತ್ತು ಯುಡಿಐಡಿ ಕಾರ್ಡ್ ಹೊಂದಿರುವ ಮಕ್ಕಳಿಗೆ ಮಾತ್ರ ಸರ್ಕಾರಿ ಸೌಲಭ್ಯ ಸಿಗುತ್ತದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಡೋಂಬಾಳೆ ರಮೇಶ, ಎಂಡಿ ನೈಮೋದ್ದೀನ್ ಲಿಂಬಾಪುರೆ, ಶಶಿಕಾಂತ ಬಿಡವೆ, ಇಸಿಓ ಸಂಜಯ ಮೇತ್ರೆ, ಸಂತೋಷ್ ರೆಡ್ಡಿ ಯಾಮಲೆ ವಿಕಲಚೇತನ ಮಕ್ಕಳು, ಪಾಲಕರು, ಸಿ ಆರ್ ಪಿ, ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ : ರಾಚಯ್ಯ ಸ್ವಾಮಿ