ಅಗತ್ಯ ಸೌಲಭ್ಯಗಳಿಗಾಗಿ ಅತನೂರ ಗ್ರಾಮಸ್ಥರು ಆಗ್ರಹ

ಅಗತ್ಯ ಸೌಲಭ್ಯಗಳಿಗಾಗಿ ಅತನೂರ ಗ್ರಾಮಸ್ಥರು ಆಗ್ರಹ ಸಾರ್ವಜನಿಕರ ಪರ ಜಯ ಕರ್ನಾಟಕ ಸಂಘಟನೆಯ ಶತಸಿದ್ದ ಎಂದು ಹೇಳಿರುವ ಜಯ ಕರ್ನಾಟಕ ತಾಲೂಕು ಅಧ್ಯಕ್ಷರಾದ ನಿಂಗರಾಜ ಕಟ್ಟಿಮನಿ.

ಅಫಜಲಪುರ ತಾಲೂಕಿನ ಅತನೂರ ಗ್ರಾಮದ ಜನರ ಮೂಲಭೂತ ಸೌಕರ್ಯಗಳಿಗಾಗಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಅತನೂರ ಗ್ರಾಮದಲ್ಲಿ ಬೃಹತ್ ಪ್ರತಿಭೆಯ ಮೂಲಕ ರಸ್ತೆ ತಡೆದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷರಾದ ನಿಂಗರಾಜ ಕಟ್ಟಿಮನಿ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಎದ್ದು ಕಾಣುತ್ತಿದೆ ಅದನ್ನು ಅಧಿಕಾರಿಗಳು ಗಮನಕ್ಕೆ ತಂದು ಸಾರ್ವಜನಿಕ ಮಾತಿಗೆ ಕಿಮ್ಮತ ಇಲ್ಲದಂತಹ ವಾಗಿದೆ ಕುಡಿಯುವ ನೀರಿನ ಸಮಸ್ಯೆಯೇ ಸೇರಿದಂತೆ ಹಲವು ಸಮಸ್ಯೆ ಇರುವುದರಿಂದ.

ಗಮನಕ್ಕೆ ಬಂದಾಗ ಕೊಡಲೇ ನಾವು ಪ್ರತಿಭಟನೆ ಹಮ್ಮಿಕೊಂಡಿದೆವೆ ಒಂದು ವಾರದ ಒಳಗಗಾಗಿ ಅತನೂರ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಇಲ್ಲವಾದರೆ ನಾವು ನಮ್ಮ ಸಂಘಟನೆಯ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ವರದಿ : ಸೈಫನ್ ಮುಲ್ಲಾ

error: Content is protected !!