ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಮಾಜ ಸೇವಕ, ಇಂಡಿಯನ್ ಟಿವಿ 24×7 ಕನ್ನಡ ಸುದ್ದಿವಾಹಿನಿಯ ಮುಖ್ಯಸ್ಥರಾದ ಎಂ ಕೆ ಯಾದವಾಡ ,ಅವರು ರಾಮದುರ್ಗ ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ವಿವಿಧ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ತಾಲೂಕಿನ ಅಭಿವೃದ್ಧಿಗೆ ಮತ್ತು ತಾಲೂಕಿನ ಜನತೆಯ ಏಳ್ಗೆಗಾಗಿ ಮತ್ತು ಎಲ್ಲ ಸಮುದಾಯಗಳ ನಡುವೆ ಸಹೋದರತ್ವ ಹಾಗೂ ಭಾತೃತ್ವ ಸ್ಥಾಪನೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ.
ಇತ್ತೀಚೆಗೆ ಪ್ರತಿಷ್ಠಿತ HMC ಅಂತರರಾಷ್ಟ್ರೀಯ ಸಂಸ್ಥೆಯು ಸಮಾಜ ಸೇವಕನ ಸಾಮಾಜಿಕ ಸೇವೆ ಮತ್ತು ಕಾರ್ಯಗಳನ್ನು ಗಮನಿಸಿ “ಅಂತ್ರಷ್ಟ್ರೀಯ ಭಾರತ ಶಕ್ತಿ ಮತ್ತು ಯುನೈಟೆಡ್ ಸ್ಟೇಟ್ಸ್ ಗ್ಲೋಬಲ್ ಎಕ್ಸಲೆನ್ಸ್ ಶಾಂತಿ ಪ್ರಶಸ್ತಿ” ಮಲೇಷಿಯಾದಲ್ಲಿ ನೀಡಿ ಗೌರವಿಸಿತ್ತು.
ಈಗ ಎಂ ಕೆ ಯಾದವಾಡಗೆ ಮತ್ತೊಂದು ಅಂತರರಾಷ್ಟ್ರೀಯ ಪ್ರಶಸ್ತಿ ನೀಡಿದೆ ಹಾಗೂ ಸಮಾಜದ ಪ್ರತಿ ಇವರ ಸೇವೆಯನ್ನು ಪರಿಗಣಿಸಿ” ದುಬೈನ ದಿ ಗ್ಲೋಬಲ್ ಅಂತರರಾಷ್ಟ್ರೀಯ ಸಂಸ್ಥೆಯು ಮತ್ತೊಮ್ಮೆ ಈವರಿಗೆ 2025ನೇ ಸಾಲಿನ ಜಾಗತಿಕ ಮಾನವಿಕ ಪ್ರಶಸ್ತಿಗಳು – 2025 ಗ್ಲೋಬಲ್ ಅಚಿವರ್ಸ ಪ್ರಶಸ್ತಿ ದುಬೈನ ಸೆವೆನ್ ಸೀಸ್ ಲೈವ್ ಗ್ರ್ಯಾಂಡ್ ಅಲ್ ನಹ್ದಾ, ದುಬೈನಲ್ಲಿ ನಿಡಿದ್ದಾರೆ. ಹಾಗೂ ಸದರಿ ಸಂಸ್ಥೆಯ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.
ನಾನು ಈ ಮಟ್ಟಕ್ಕೆ ಬೆಳೆಯಲು ಹಾಗೂ ನನಗೆ ಈ ಪದವಿ ದೊರಕಲು ತಮ್ಮೆಲ್ಲರ ಹಾರೈಕೆ, ಪ್ರೀತಿ,ವಿಶ್ವಾಸ ಮತ್ತು ನನಗೆ ನೀಡುತ್ತಿರುವ ಬೆಂಬಲವೆ ಕಾರಣ.
ಹಾಗಾಗಿ ತಾವೆಲ್ಲರೂ ನನಗೆ ನೀಡಿದ ಹಾರೈಕೆ, ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕಾಗಿ ನಾನು ಸದಾ ಚಿರಋಣಿ. ತಮ್ಮೆಲ್ಲರ ಹಾರೈಕೆ ಗಳಿಗೆ ಅನಂತ ಅನಂತ ಧನ್ಯವಾದಗಳು. ತಮ್ಮೆಲ್ಲರ ಪ್ರೀತಿ,ವಿಶ್ವಾಸ ,ನಂಬಿಕೆ ಇದೇ ರೀತಿ ಸದಾ ನನ್ನ ಮೇಲಿರಲಿ ಮತ್ತೊಮ್ಮೆ ತಮ್ಮೆಲ್ಲರಿಗೂ ಅನಂತ ಅನಂತ ಕೃತಜ್ಞತೆಗಳು”
ವರದಿ ಎಂ.ಡಿ ಸೋಹೆಲ್ ಬೈರಾಕದಾರ್
