ಭಾರತ ದೇಶ ಕೃಷಿ ಪ್ರಧಾನವಾದಂತ ದೇಶ ಅನ್ನುವುದು ನಾವು ನೀವುಗಳೆಲ್ಲ ನೋಡ್ತಾ
ಕೇಳ್ತಾ ಓದುತ್ತಾ ಬಂದಿದೆ ಅದು ಸತ್ಯ ಕೂಡ
ಆದ್ರೂ ಒಂದು ಸತ್ಯ ತಮ್ಮ ಗಮನಕ್ಕೆ ಇರಲಿ
ನಮ್ಮ ಮತಗಳನ್ನು ಪಡೆದು ಆಳುವಂಥ
ಶಾಸಕರು ಹಾಗೂ ಸಂಸದರು ಕೆಲವು ಯೋಜನೆಗಳಿಗೆ ಸಂಬಂಧಪಟ್ಟಂತ ಇಲಾಖೆಯ ಸಂಯೋಗದೊಂದಿಗೆ ಅದೆಷ್ಟು ಪ್ರಚಾರಗಳು ಯೋಜನೆಗಳು ಜಾರಿಗೆ ತರುತ್ತಾರೆ ಅದರ ಬಗ್ಗೆ ಪ್ರಚಾರ ಕೂಡ ಕೊಡ್ತಾರೆ ಇದು ನಾವು ನೋಡಿದ್ದೇವೆ ನೀವು ನೋಡ್ತಾ ಇದ್ದೀರಿ ಸತ್ಯ ಅಲ್ವಾ “ನೋಡಿ ಇಲ್ಲಿ ಒಂದು ಸತ್ಯ ಇದ
ಬೀದರ್ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಗೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ವಲಯ ಅರಣ್ಯ ಇಲಾಖೆಯ ವತಿಯಿಂದ ರೈತರು ಮರ-ಗಿಡಗಳನ್ನು ಬೆಳೆಯಲು ”ಕೃಷಿ ಪ್ರೋತ್ಸಾಹ”
ಧನ ಸಹಾಯ ಎನ್ನುವ ಯೋಜನೆ ಇದೆ ಅದು
ಒಂದು ಗಿಡವನ್ನು ನೆಟ್ಟಿದ್ರೆ
ಮೊದಲನೇ ವರ್ಷಕ್ಕೆ ರೂ.10
ಎರಡನೇ ವರ್ಷಕ್ಕೆ 15 ರೂಪಾಯಿ ,
ಮೂರನೇ ವರ್ಷಕ್ಕೆ ರೂ.20 ಹೀಗೆ ಹೊಲಗಳಲ್ಲಿ ರೈತರು ಹೊಲಗಳಲ್ಲಿ ಗಿಡಗಳು ಬೆಳೆಸಲಿ ಅದಕ್ಕೆ ಮೆಂಟೇನೆನ್ಸ್ ಅಂತ ಸರ್ಕಾರ ದುಡ್ಡು ಕೊಡುತ್ತೆ ಅಂತ ಪ್ರಚಾರ ಮಾಡಿದೆ ಹಿಂದೆ ಕೂಡ ಕೊಟ್ಟಿದೆ ಸಾಧ್ಯ ರೈತರು ಹೋಗಿ ಇಲಾಖೆ ವತಿಯಿಂದ ಸಸ್ಯಗಳನ್ನು ರೈತರು ಜಮೀನಿನಗಳಲ್ಲಿ ಹಚ್ಚಿ ಬೆಳೆಸುತ್ತಾರೆ , 2019 – 20ನೆಯ ಸಾಲಿನಲ್ಲಿ ಚಿಂಚೋಳಿ ತಾಲೂಕಿನಲ್ಲಿ ಒಲೆ ಅರಣ್ಯ ಇಲಾಖೆ ವತಿಯಿಂದ ರೈತ ಕೃಷಿ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಫಲಾನುಭವಿಗಳು 47 ಜನ ಇಲಾಖೆಯಿಂದ ಪಡೆದ ಸಸಿ 23,944
2020- 21ನೇ ಸಾಲಿನಲ್ಲಿ ವಲಯ ಅರಣ್ಯ ಅಧಿಕಾರಿಗಳಿಂದ ಪಡೆದ ರೈತ ಫಲಾನುಭವಿಗಳ ಸಂಖ್ಯೆ -106
ಇಲಾಖೆ ವತಿಯಿಂದ ವಿತರಿಸಿದ ಸಸಿಗಳ ಸಂಖ್ಯೆ = 41,667
2022 -23ನೇ ಸಾಲಿನಲ್ಲಿ
ತಾಲೂಕಿನಲ್ಲಿ ಅರಣ್ಯ ಅಧಿಕಾರಿಗಳಿಂದ ಪಡೆದ ಫಲಾನುಭವಿಗಳ ಸಂಖ್ಯೆ -41 ಅರಣ್ಯ ಇಲಾಖೆ ರೈತರಿಗೆ ಕೊಟ್ಟ ಸಸ್ಯಗಳ ಸಂಖ್ಯೆ = 16,705. ಒಟ್ಟ ಮೂರು ಕಂತು ಪ್ರೋತ್ಸಾಹ ಧನ ಇಲ್ಲ.
2023 24ನೇ ಸಾಲಿನಲ್ಲಿ ವಲಯ ಅರಣ್ಯ ಇಲಾಖೆ ವತಿಯಿಂದ ತಾಲೂಕಿನಲ್ಲಿ ಫಲಾನುಭವಿಗಳ ರೈತರು ಪಡೆದ ಸಂಖ್ಯೆ = 33ಜನ
ಇಲಾಖೆ ವತಿಯಿಂದ ವಿತರಿಸಿದ ಸಸಿ ಸಂಖ್ಯೆ = 17, 277 ಈ ಸಾಲಿನಲ್ಲಿ ಕೂಡ ಮೂರು ಹಂತದ ಕಂತುಗಳು ರೈತರಿಗೆ ಪ್ರೋತ್ಸಾಹ ಧನ ಕೊಟ್ಟಿಲ್ಲ.
ತಾಲೂಕಿನಲ್ಲಿ ಈ ಹಿಂದೆ ಕಾಡು ಹಂದಿ ದಾಳಿಗೆ ಒಳಗಾದವರಿಗೂ ಹಾಗೂ ಬೆಳೆ ಹಾನಿಯಾದಂತ ರೈತರಿಗೂ ಕೂಡ ಪರಿಹಾರ ಕೊಟ್ಟಿಲ್ಲ ಈ ರೀತಿಯಿಂದ ತುಂಬಾ ತೊಂದರೆ ಆಗುತ್ತಿದ್ದು ರೈತರಿಗೆ , ಈ ಕೂಡಲೇ ತಡೆದಿರುವಂತ ರೈತರ ಧನ ಸಹಾಯವನ್ನು ರೈತ ಫಲಾನುಭವಿಗಳಿಗೆ ಕೊಟ್ಟು ಈ ಭಾಗದಲ್ಲಿನ ಗಿಡಗಳನ್ನು ಬೆಳೆಯಲು ಪ್ರೋತ್ಸಾ ಮಾಡಿ .
ರೈತರ ಸಸಿಗಳ ಮೆಂಟೇನೆನ್ಸ್ ಮಾಡುವುದಕ್ಕೆ ಸರಕಾರದಿಂದ ಬರಬೇಕಾದಂತ ದುಡ್ಡು ಇವತ್ತಿಗೂ ಕೂಡ ಅಂದ್ರೆ 2019 ರಿಂದ 2025 ರವರೆಗೆ ಇವತ್ತಿಗೂ ಕೂಡ ರೈತರಿಗೆ ಆ ಹಣ ಬಿಡುಗಡೆ ಮಾಡಿಲ್ಲ ಬಿಡುಗಡೆ ಆದ ಹಣ ಬರ್ತಾ ಇಲ್ಲ ಫಲಾನುಭವಿಗಳಿಗೆ ಇದರಿಂದ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ ಇಲಾಖೆಯ ಸಚಿವರು ಹಾಗೂ ಸಂಬಂಧಪಟ್ಟಂತ ಅಧಿಕಾರಿಗಳ ರೈತರ ಜೊತೆಗೂಡಿ ಹೋಗಿ ಕೇಳಿದರೆ ಬರಬೇಕಾದಂತ ಸರ್ಕಾರದ ವತಿಯಿಂದ ಅನುದಾನ ಬಂದಿಲ್ಲ , ಸರಕಾರ ಅನುದಾನ ಜಾರಿಗೆ ಮಾಡಿದಾಗ ಕೊಡುತ್ತೇವೆ ಎನ್ನುವ ಉತ್ತರ .
“ಕಲ್ಯಾಣ – ಕರ್ನಾಟಕ” ವೆಂದರೆ ಕಲಬುರ್ಗಿ
ತುಂಬಾ ಬಿಸಿಲು ಎಂದು ಕರೆಯುವಂತ ಈ ಪ್ರದೇಶದಲ್ಲಿ
ಕಲ್ಬುರ್ಗಿ ಜಿಲ್ಲೆಯಲ್ಲಿ 25 ಲಕ್ಷ ಸಸಿಗಳನ್ನು ಐದು ಕಿಲೋಮೀಟರ್ ವರೆಗೆ ರಸ್ತೆ ಬದಿಯಲ್ಲಿ ಕಾರ್ಯಕ್ರಮವನ್ನು ಸರಕಾರವೇ ಹಾಕಿಕೊಂಡಿದ್ದೆ
ಅದರಲ್ಲಿ ಚಿಂಚೋಳಿ ತಾಲೂಕಿನ ರೈತರ ವತಿಯಿಂದ
ನಿಮ್ಮ ಇಲಾಖೆಗೆ ಬರುವಂತಹ ರೈತ ಕೃಷಿ ಪ್ರೋತ್ಸಾಹ ಯೋಜನೆ ಕೂಡಲೇ ಬಿಡುಗಡೆ ಮಾಡಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ರೈತರು ಹೊಲಗಳಲ್ಲಿ ಗಿಡ ಮರಗಳನ್ನು ಬೆಳೆಯುತ್ತರೆ.
ಕಲಬುರ್ಗಿಯಲ್ಲಿ ಅರಣ್ಯ ಸಚಿವರು ಜಿಲ್ಲಾ
5 ನೇ ತಾರೀಕು 25 ಲಕ್ಷ ಅಧಿಕ ಸಸಿಗಳ ಹಚ್ಚುವುದರ ಮುಖಾಂತರ “ಕಲ್ಬುರ್ಗಿ ಹಸಿರು” ಜಿಲ್ಲೆ ಮಾಡುವಂತ ಪಣವನ್ನು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ , ಜೊತೆಗೆ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವಂತ ತಮ್ಮ ಇಲಾಖೆಯ ಸಸಿಗಳಿಗೂ ಕೂಡ ಪ್ರೋತ್ಸಾಹ ಧನಸಹಾಯ ಒದಗಿಸಿ ರೈತರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಸಂಬಂಧಪಟ್ಟ ಅರಣ್ಯ ಸಚಿವರಿಗೆ ಕಲ್ಬುರ್ಗಿ ಉಸ್ತುವಾರಿ ಮಂತ್ರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸರಕಾರಕ್ಕೆ ರೈತರ ವತಿಯಿಂದ ಗೋಪಾಲ ಎಂ ಪಿ ಗಾರಂಪಳ್ಳಿ ಅವರು ಆಗ್ರಹವನ್ನು ಮಾಡಿದ್ದಾರೆ.
ವರದಿ ರಾಜೇಂದ್ರ ಪ್ರಸಾದ್