ಉಚಿತ ಸ್ಕೂಲ ಬ್ಯಾಗ ಮತ್ತು ನೋಟ್ ಬುಕ್ ವಿತರಣಾ ಕಾರ್ಯಕ್ರಮ

ದಿನಾಂಕ 10/07/2025 ರಂದು ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಮಾದರಿ ಹಿರಿಯ ಪ್ರಥಮಿಕ ಶಾಲೆ ನಂ 49 ಅಫಜಲಪುರ ಟಕ್ಕೆ ವಿಜಯಪುರ ನಗರ ಶಾಲೆಯಲ್ಲಿ ವಿಜಯಪುರ ನಗರ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಸನಗೌಡ ರಾ ಪಾಟೀಲ(ಯತ್ನಾಳ) ರವರ ನೇತ್ರತ್ವದಲ್ಲಿ ರಾಷ್ಟ್ರೀಯ ಗ್ರಾಮೀಣ ಸ್ವಾಸ್ಥ್ಯ ಮಿಶನ ನವ ದೆಹಲಿ ಇವರು ಮಕ್ಕಳಿಗೆ ಉಚಿತವಾಗಿ ಕೊಡಮಾಡಿದ ಶಾಲಾ ಬ್ಯಾಗಗಳು ಹಾಗೂ ಕರ್ನಾಟಕದ ಅಗ್ರಗಣ್ಯ ಔಷಧಿ ಮಳಿಗೆಯಾದ ಮಾರುತಿ ಮೆಡಿಕಲ್ ಸ್ಟೋರ್ಸ್ ಬೆಂಗಳೂರು ಇವರು ಕೊಡಮಾಡಿದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸನ್ಮಾನ್ಯ ಶ್ರೀ ಸಂಗಮೇಶ ಬಬಲೇಶ್ವರ ಅಧ್ಯಕ್ಷರು ಕರ್ನಾಟಕ ಬಾಲ ವಿಕಾಸ ಅಕಾಡಮಿ, ಧಾರವಾಡ, ಇವರು ಮಾತನಾಡುತ್ತ ಮಕ್ಕಳ ಸರ್ವೋತ್ತಮ ಅಭಿವೃದ್ಧಿಗಾಗಿ ಸರಕಾರಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಬ್ಯಾಗ ಮತ್ತುನೋಟಬುಕ್ ಗಳನ್ನು ದಾನಿಗಳಿಂದ ಸಂಗ್ರಹಿಸಿ ವಿತರಿಸುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಮತ್ತು ಶಾಲೆಯಲ್ಲಿ ಮಕ್ಕಳು ನಡೆಸಿದ ಶಿಸ್ತು ಬದ್ಧ ಶಾಲಾ ಚಟುವಟಿಕೆ ರೀತಿ ಮಾದರಿಯಾಗಿದೆ ಎಂದು ಹೇಳಿದರು. ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಸೆಲೆಬ್ರೆಟಿಗಳಾಗಬೇಕು ಮತ್ತು ನೀವು ನಡೆದುಕೊಂಡು ಬರುವಾಗ ಎಲ್ಲರೂ ನಿಮ್ಮ ಜೊತೆ ನಿಂತು ಸೆಲ್ಪಿ ತೆಗೆದುಕೊಳ್ಳುವಂತೆ ಬೆಳೆಯಬೇಕು ಎಂದು ಪ್ರೋತ್ಸಾಹಿಕ ಮಾತುಗಳನ್ನಾಡಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

ಮುಖ್ಯ ಅತಿಥಿಗಳಾದ ಸನ್ಮಾನ್ಯ ಶ್ರೀ ಅಲ್ತಾಫ ಇಟಗಿ ಮಹಾನಗರ ಪಾಲಿಕೆ ಸದಸ್ಯರು ಮಾತನಾಡಿ ಈ ಶಾಲೆಯಲ್ಲಿ ಕಲಿತ 5 ವಿದ್ಯಾರ್ಥಿಗಳು ಮುರಾರ್ಜಿ ವಸತಿ ಶಾಲೆಗೆ ಆಯ್ಕೆ ಯಾಗಿರುವುದು ಸಂತೋಷ ತಂದಿದೆ ಎಂದು ಹೇಳಿದರು,

ಶ್ರೀ ಎ ಕೆ ದಳವವಾಯಿ ಶಿಕ್ಷಣ ಸಂಯೋಜಕರು ಮಾತನಾಡುತ್ತ ಗುರು ಪೂರ್ಣಿಮೆ ದಿನ ಬಾಲ ವಿಕಾಸ ಅಕಾಡಮಿ ಧಾರವಾಡದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸಂಗಮೇಶ ಬಬಲೇಶ್ವರ ರವರು ಶಾಲೆಗೆ ಆಗಮಿಸಿರುವುದು ಸಂತಸ ತಂದಿದೆ, ಶಾಲೆಯ ಎಸ್‌ಡಿ ಎಮ್ ಸಿ ಅಧ್ಯಕ್ಷರು ಮತ್ತು ಮುಖ್ಯಗುರುಗಳು ಈ ರೀತಿ ದಾನಿಗಳಿಂದ ಸುಮಾರು 27 ಲಕ್ಷರೂಪಾಯಿಗಳ ವರೆಗಿನ ವಸ್ತುಗಳನ್ನು ದಾನ ಪಡೆದು ಬಡ ಶಾಲಾ ಮಕ್ಕಳಿಗೆ ತಲುಪಿಸುತ್ತಿರುವ ಕಾರ್ಯ ವಿಜಯಪುರ ನಗರ ವಲಯದಲ್ಲೆ ಮಾದರಿ ಎಸ್ ಡಿ ಎಮ್ ಸಿ ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಯೋಗೇಶಕುಮಾರ ನಡುವಿನಕೇರಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ತಮ್ಮ ಅವಧಿಯಲ್ಲಿ ನೂತನ ಧ್ವಜಸ್ಥಂಭ ನಿರ್ಮಾಣ, ಆಪ್ಟಿಕಲ್ ಟಚ್ ಬೋರ್ಡ ಮತ್ತು ನೋಟ್ ಬುಕ್, ಮತ್ತು 125 ಬೆಂಚುಗಳನ್ನು ಶ್ರೀ ವಿಶ್ವನಾಥ ಸಿಂದಗಿ ಸಂಯೋಜಕರು ತಾಪಿದಾಸ ತುಳಸಿದಾಸ ವ್ರಜದಾಸ ಚಾರಿಟೇಬಲ್ ಟ್ರಸ್ಟ ಮುಂಬೈ ಇವರ ಮುಖಾಂತರ ಪಡೆಯಲಾಯಿತೆಂದು ತಿಳಿಸಿದರು. ಮೆಂಡಾ ಫೌಂಡೇಶನ್ ಬೆಂಗಳೂರು ಇವರಿಂದ ಸ್ಮಾರ್ಟ ಕ್ಲಾಸ, ಹಾಗೂ ಬೂಸೇನಾ ನಿಗಮದ ವತಿಯಿಂದ ಮಕ್ಕಳಿಗೆ ಹೌಸ್ ಡ್ರೆಸ್, ಲಾಡ್ಲಿ ಫೌಂಡೇಶನ್ ವತಿಯಿಂದ ಹೆಣ್ಣು ಮಕ್ಕಳಿಗೆ ಹೈ ಟೆಕ್ ಶೌಚಾಲಯ, ಹಾಗೂ ಶಾಸಕರ ಅನುದಾನದಲ್ಲಿ ಶಾಲೆಗೆ ಹೈ ಮಾಸ್ಕ, ಶಾಲಾ ರಿಪೇರಿ, ವಾಟರ್ ಫಿಲ್ಟರ್ ಹಾಗೂ ವಿವೇಕ ಯೋಜನೆಯಡಿಯಲ್ಲಿ 2 ಶಾಲಾ ತರಗತಿ ಕೋಣೆಗಳನ್ನು ಮಂಜೂರಿಸಿರುವುದರ ಜೊತೆಗೆ ನನ್ನನ್ನು ವಿಧಾನಸಭಾ ಕ್ಷೇತ್ರದ ತಾಲೂಕು ಮಟ್ಟದ ಶಿಕ್ಷಣ ಸುಧಾರಣಾ ಸಮಿತಿಗೆ ನಾಮನ ರ್ದೇಶನ ಮಾಡಿದ್ದಕ್ಕಾಗಿ ಸನ್ಮಾನ್ಯ ನಗರ ಶಾಸಕರು ಶ್ರೀ ಬಸನಗೌಡ ರಾ ಪಾಟೀಲ್ (ಯತ್ನಾಳ) ರವರಿಗೆ ಅಭಿನಂದನೆಗಳನ್ನ ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ ಪಡಗಾನುರ, ಗ್ರಾಮಸ್ಥರಾದ ಆರೀಫ್ ಜತ್ತ ಬಂದೇನವಾಜ ನಗಾರ್ಚಿ, ಮಹಾದೇವ ದೊಡಮನಿ, ಶರಣಪ್ಪ ಚಲವಾದಿ, ಸಂತೋಷ ಲವಗಿ, ಸಾಬು ಹೆಳವರ ರವರು ಭಾಗವಹಿಸದ್ದರು.

ಚಂದ್ರಕಾಂತ ಕನಸೆ ಮುಖ್ಯ ಗುರುಗಳು ಸ್ವಾಗತಿಸಿದರು, ಮಲ್ಲಯ್ಯ ಸ್ವಾಮಿ ಶಿಕ್ಷಕರು ನಿರುಪಣೆ ಮಾಡಿದರು,ಸವಿತಾ ತಿಗಡಿ ಶಿಕ್ಷಕಿಯರು ವಂದಿಸಿದರು.

error: Content is protected !!