ಚಿಂಚೋಳಿ ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ನಡೆದಂತಹ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ
ಶ್ರೀ ವೀರೇಂದ್ರ ಪಾಟೀಲ ಪಬ್ಲಿಕ್ ಸ್ಕೂಲ್ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ವಿಭಾಗದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ವೈಯಕ್ತಿಕ ವಿಭಾಗದಲ್ಲಿ ಲಕ್ಷ್ಮಿಕಾಂತ 100 ಮೀಟರ್ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ,
ನಾಗವೇಣಿ, ಮತ್ತು ವೀರರೆಡ್ಡಿ 600 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಹಾಗೂ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಹಾಗೂ 14 ವರ್ಷದ ಒಳಗಿನ ಬಾಲಕರ ಖೋ-ಖೋ ದ್ವಿತೀಯ ಸ್ಥಾನ ಹಾಗೂ 17 ವರ್ಷದ ಒಳಗಿನ ಬಾಲಕರ ವಾಲಿಬಾಲ್ ದ್ವಿತೀಯ ಸ್ಥಾನ.4*100 ಮೀಟರ್ ರಿಲೇ ದ್ವಿತೀಯ ಸ್ಥಾನ . ಎಲ್ಲಾ ಕ್ರೀಡಾಪಟುಗಳಿಗೆ . ಸಂಸ್ಥೆಯ ಅಧ್ಯಕ್ಷರು ಉಪಾಧ್ಯಕ್ಷ ರುಗಳಾದ ಬಸವರಾಜ ಮಲಿ ಹಾಗೂ ಮುಖ್ಯ ಗುರುಗಳಾದ ವಿಶ್ವನಾಥ ನಾಯನೂರ್, ದೈಹಿಕ ಶಿಕ್ಷಕರು, ತಂಡದ ಮ್ಯಾನೇಜರ ಸುಜಾತ ತ್ರಿಪಾಠಿ, ಹಾಗೂ ಎಲ್ಲಾ ಶಿಕ್ಷಕ, ಶಿಕ್ಷಕಿಯರು ಅಭಿನಂದನೆಗಳನ್ನು ಸಲ್ಲಿಸಿದರು.
ವರದಿ : ರಾಜೇಂದ್ರ ಪ್ರಸಾದ್