ಬಸವನಗುಡಿ ಪೊಲೀಸ್ ಠಾಣೆ :
ಈಗಾಗಲೇ 14 ಗಂಭೀರ ಪ್ರಕರಣಗಳಲ್ಲಿ ಆರೋಪಿತನಾಗಿರುವ ಮತ್ತು ನಿರಂತರವಾಗಿ ಅಪರಾಧ ಕೃತ್ಯ ಗಳಲ್ಲಿ ಭಾಗಿಯಾಗುತ್ತಿರುವ ಪುನೀತ್ ಕೆರೆಹಳ್ಳಿ ಎಂಬುವವನನ್ನು ದಿನಾಂಕ:10/09/2025 ರಂದು ಹೆಚ್ಚಿನ ಅಪರಾಧ ಕೃತ್ಯ ವೆಸಗುವುದನ್ನು ತಡೆಗಟ್ಟಲು ಬಸವನಗುಡಿ ಪೊಲೀಸರು ಮುಂಜಾಗೃತ ಕ್ರಮವಾಗಿ 127 ಬಿ.ಎನ್.ಎಸ್.ಎಸ್ ರೀತ್ಯಾ ಪ್ರಕರಣ ದಾಖಲಿಸಿ, ಮುಂದಿನ ಕ್ರಮಕ್ಕಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ದಕ್ಷಿಣ ವಿಭಾಗ, ಬೆಂಗಳೂರು ನಗರ ರವರ ಮುಂದೆ ಹಾಜರುಪಡಿಸಿದ್ದು. ಇನ್ನು ಮುಂದೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲವೆಂದು. ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆಗೆ ಭಂಗವನ್ನುಂಟು ಮಾಡುವುದಿಲ್ಲವೆಂದು ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಭಂಗವನ್ನುಂಟು ಮಾಡುವುದಿಲ್ಲವೆಂದು ಮುಚ್ಚಳಿಕೆಯನ್ನು ನೀಡಲು ತಿಳಿಸಿದ್ದು, ಮುಚ್ಚಳಿಯನ್ನು ನೀಡಲು ನಿರಾಕರಿಸಿದ್ದರಿಂದ ಈ ವ್ಯಕ್ತಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ, ದಕ್ಷಿಣ ವಿಭಾಗ, ಬೆಂಗಳೂರು ನಗರ ರವರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿರುತ್ತಾರೆ.
ವರದಿ : ಮುಬಾರಕ್