ಕಾಂಗ್ರೆಸ್ ಪಕ್ಷದಿಂದ ದೂರ ಸರಿಯುತ್ತಿರುವ ಮಾಜಿ ಸಚಿವ ದಿ. ದೇವೇಂದ್ರಪ್ಪ ಘಾಳಪ್ಪ ಅವರ ಮಗ ಅನಿಲ ಜಮಾದಾರ
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾಗಿರುವಂತಹ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಆರಂಭಿಕ ರಾಜಕೀಯ ಜೀವನದಲ್ಲಿ ಪ್ರಮುಖ ಕಾರಣರಾಗಿದ್ದ ಮಾಜಿ ಸಚಿವ ದಿವಂಗತ ದೇವೇಂದ್ರಪ್ಪ ಘಾಳಪ್ಪನವರು, ಎಂಬುದು ಅಕ್ಷರ ಸತ್ಯ ಈ ಮಾತನ್ನು ಹಲವಾರು ಬಾರಿ ಖರ್ಗೆ ಅವರು ಆಗಾಗ ಪ್ರಸ್ತಾಪನೆಗಳು ಮಾಡಿದ್ದುಂಟು, ಆದರೆ ಅವರ ಮಗನಾದ ಅನಿಲ ಜಮಾದಾರ ರಾಜಕೀಯ ಪರಿಸ್ಥಿತಿ ಅವಕಾಶಗಳು ಇನ್ನೂ ಮರಿಚಿಕಿಯಾಗಿ ಉಳಿದಿವೆ.
ಕೇವಲ ಔಪಚಾರಿಕ ವೆಂಬಂತೆ ಕಾಂಗ್ರೆಸ್ ಪಕ್ಷದ ಸದಸ್ಯನಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂತೆ ಇವರ ರಾಜಕೀಯ ಜೀವನ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ ಖರ್ಗೆ ಅವರು ಈಗ ಕಲ್ಬುರ್ಗಿ ಉಸ್ತುವಾರಿ ಮಂತ್ರಿಗಳು ಹಾಗೂ ಸಚಿವರು ಇದ್ದಾರೆ, ಇದಕ್ಕೆ ಹೋಲಿಕೆ ಮಾಡಿದರೆ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಜೀವನಕ್ಕಿಂತ ಮುಂಚೇನೆ ಸಚಿವರಿದ್ದ ದಿ. ದೇವೇಂದ್ರಪ್ಪ ಘಾಳಪ್ಪನವರು, ಆದರೆ ಈಗಿನ ಸದ್ಯದ ಪರಿಸ್ಥಿತಿ ಯಲ್ಲಿ ಅನಿಲ್ ಜಮಾದಾರ್ ರಾಜಕೀಯ ಜೀವನ ನಿಂತು ನೀರಾಗಿದೆ. ಯಾವುದೇ ಹುದ್ದೆ ಇಲ್ಲ ಯಾವುದೇ ಜವಾಬ್ದಾರಿಯುತ ಸ್ಥಾನಮಾನಗಳು ಕೂಡ ಕಾಂಗ್ರೆಸ್ ಪಕ್ಷ ನೀಡಿಲ್ಲ, ಇದಕ್ಕೆ ಇದಕ್ಕೆ ಬೇಸರಗೊಂಡಂತೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಂದ ದೂರ ಹಾಗೂ ನಾಯಕರ ಕಣ್ಣಿಗೆ ಕಾಣದಂತೆ ಮಾಯವಾಗುತ್ತಿರುವ ಅನಿಲ ಜಮಾದಾರ ಜೀವನದಲ್ಲಿ ನೊಂದಿದ್ದಾರೆ. ಈಗಾಗಲೇ ಹಲವು ಬಾರಿ ರಾಜೀನಾಮೆ ಪತ್ರ ಹಾಗೂ ಪತ್ರಿಕಾಗೋಷ್ಠಿ ನಡೆಸಿ ರಾಯಚೂರು ಉಸ್ತುವಾರಿ ಮಂತ್ರಿಗಳು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ರಾಜೀನಾಮೆ ಪತ್ರ ಕೊಡಲು ಹೋದಾಗ ಅನಿಲ ಜಮಾದಾರ ಅವರಿಗೆ ಸಮಜಾಯಿಸಿ ಹೇಳಿ ಕೆಲವು ದಿನಗಳ ನಂತರ ಉನ್ನತ ಸ್ಥಾನಮಾನ ಕೊಡುವುದಾಗಿ ಹೇಳಿದರು , ಅನಿಲ ಜಮಾದಾರಗೆ ಕೋಂಚ ಶಾಂತಗೊಳಿಸಿದರು. ಅದಾಗಿ ಹಲವಾರು ತಿಂಗಳು ಗತಿಸಿದ್ರು ಯಾವುದೇ ಹುದ್ದೆಗಳನ್ನು ನೀಡಿಲ್ಲ ಇದನ್ನು ನೋಡಿ ಅನಿಲ ಜಮಾದಾರ ಹತಾಶರಾಗುತ್ತಿದ್ದು, ದಿವಂಗತ ದೇವೇಂದ್ರಪ್ಪ ಘಾಳಪ್ಪನವರು ಸಚಿವರಾಗಿದ್ದಾಗ ಅನೇಕ ರಾಜಕೀಯ ಮುಖಂಡರು ಇವರ ಶಿಫಾರಸಿನ ಮೇರೆಗೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ದೊಡ್ಡ ನಾಯಕರಾಗಿದ್ದಾರೆ. ಆದರೆ ವಿಭಿನ್ನವೆಂಬಂತೆ ಅನಿಲ ಜಮಾದಾರ ಮಾತ್ರ ಕಾಂಗ್ರೆಸ್ ಪಕ್ಷದ ನಿರುದ್ಯೋಗಿ ಮುಖಂಡನಂತೆ ಗೋಚರಿಸುತ್ತಿದ್ದು, ಉಪಕಾರ ಮಾಡಿದವರಿಗೆ ಪರೋಪಕಾರ ಮಾಡುವ ಬದಲಿಗೆ ವ್ಯವಸ್ಥಿತವಾಗಿ ಮೂಲೆಗುಂಪು ಮಾಡಿರುವುದು ನೋಡಿದರೆ ನಿಜಕ್ಕೂ ಕಾಂಗ್ರೆಸ್ ಕಟ್ಟಾಕತ್ತರಿಗೆ ಇದೊಂದು ಜಿಜ್ಞಾಸೆಯ ಪ್ರಶ್ನೆಯಾಗಿ ಉಳಿದಿದೆ.
ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಿ ಪ್ರತಿಕ್ರಿಯಿಸಿ ಕಾಂಗ್ರೆಸ್ ಹೈಕಮಾಂಡ್ ಪ್ರತಿಯೊಬ್ಬರನ್ನ ಪರಿಗಣಿಸಿ ಅವರ ಅನುಭವದ ತಕ್ಕಂತೆ ನಿಗಮ ಮಂಡಳಿಗಳ ಹಾಗೂ ನಾಮನಿರ್ದೇಶನಗಳ ನೇಮಕ ಮಾಡುತ್ತಾರೆ ನಮ್ಮ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ ಎಂದು ಹೇಳಿದರು.
ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಗದೇವ ಗೌತಮ ಪ್ರತಿಕ್ರಿಯಿಸಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಕಲ್ಬುರ್ಗಿ ಮತ್ತು ರಾಯಚೂರು ಉಸ್ತುವಾರಿ ಮಂತ್ರಿಗಳು ಮನಸು ಮಾಡಿದರೆ ಅನಿಲ ಜಮಾದಾರ ಅವರಿಗೆ ಯಾವುದಾದರೂ ಒಂದು ಹುದ್ದೆ ನೀಡಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ವರದಿ : ರಾಜೇಂದ್ರ ಪ್ರಸಾದ್ ಎಸ್ ಕನಕಪುರ