ಅಫಜಲಪುರ : ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಗೆ ಸಿಹಿ ತಿನ್ನಿಸುವದರ ಮೂಲಕ ಶಕ್ತಿ ಯೋಜನೆ ಸಂಭ್ರಮಿಸಲಾಯಿತು.
ಮಹಿಳಾ ಸ್ವಾವಲಂಬನೆಯ ಗುರಿಯನ್ನಿಟ್ಟುಕೊಂಡು ಜಾರಿಗೊಳಿಸಲಾದ
ಶಕ್ತಿ ಗ್ಯಾರಂಟಿ ಯೋಜನೆಯಡಿ, ನಾಡಿನ ಮಹಿಳೆಯರು 500 ಕೋಟಿ ಬಾರಿ ಪ್ರಯಾಣ ಮಾಡಿರುವುದು ನಮ್ಮ ಸರ್ಕಾರದ ಸಾಧನೆಗೆ ಹಿಡಿದಿರುವ ‘ಕೈ’ಗನ್ನಡಿಯಾಗಿದೆ. ಮನೆಮನೆಯ ಗೃಹಲಕ್ಷ್ಮಿಯರ ಆಶೀರ್ವಾದ ನಮಗೆ ಸಾರ್ಥಕತೆ ತಂದಿದೆ. ಇದು ನಾರಿ’ಶಕ್ತಿ’ಯ ಗೆಲುವು ಎಂದರು
ಇದೆ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರು, ಗ್ಯಾರಂಟಿ ಯೋಜನಾ ಅಧ್ಯಕ್ಷರು, ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ಕೆಡಿಪಿ ಸದಸ್ಯರು, ಮಹಿಳಾ ಬ್ಲಾಕ್ ಅಧ್ಯಕ್ಷರು, ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಸೈಫನ್ ಮುಲ್ಲಾ