ಇಂಡಿಯನ್ ದಿವ್ಯನ್ಗ್ ಎಂಪವರ್ಮೆಂಟ್ ಅಸೋಸಿಯೇಷನ್ ಮಹಾಸಭೆ

ಶಿವಮೊಗ್ಗ: ವಿಕಲಚೇತನರು ಅಂದಿನಿಂದ ಇಂದಿನವರೆಗೆ ಶೋಷಣೆಗೊಳ್ಳುತ್ತ ದಿನದೂಡುತ್ತಿದ್ದು ಕಾಲ ಬದಲಾಗಬಹುದು ಎಂಬ ಅವರ ನಿರೀಕ್ಷೆ ಹುಸಿಯಾಗಿದೆ ಎಂದು ಇಂಡಿಯನ್ ದಿವ್ಯನ್ಗ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಸಂಸ್ಥಾಪಕ ಮತ್ತು ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧ ಇಲಾಖೆಗಳು ವಿಕಲಚೇತನರ ವಿಷಯದಲ್ಲಿ ಉದಾರತೆಯನ್ನು ತೋರದೆ ಹಠಮಾರಿ ನಿಲುವನ್ನು ಹೊಂದಿರುವುದಕ್ಕೆ ನನ್ನಲ್ಲಿ ವಿಪುಲ ದಾಖಲೆಗಳಿವೆ ಎಂದ ಅವರು ಸರಕಾರಗಳ ಅಥವಾ ಸರಕಾರದ ಇಲಾಖೆ, ಕಚೇರಿಗಳ ಇಂತಹ ದೋರಣೆಯು ಪ್ರಗತಿಪರ ಯೋಜನೆಗಳ ಆವಿಸ್ಕಾರಕ್ಕೆ ದೊಡ್ಡ ಅಡಚಣೆಯಾಗುವುದಲ್ಲದೆ ವಿಕಲಚೇತನ್ರನ್ನು ಪ್ರಚಾರದ ಸರಕಾಗಿ ಮತ್ತು ಅನುಕಪದ ಅಶ್ರವಾಗಿ ಬಳಸುತ್ತಿರುವದಕ್ಕೆ ಪ್ರಭಲ ಸಾಕ್ಷಿಯನ್ನು ನೀಡುತ್ತದೆ. ಅಂತಹ ಕ್ರೂರತನವನ್ನು ಬಿಟ್ಟು ಕೊಟ್ಟು ವಿಶಾಲ ಮನೋಭಾವವನ್ನು ಹೊಂದುವಂತಾಗ ಬೇಕು ಎಂದು ಅವರು ಮಹಾಸಭೆಯಲ್ಲಿ ಪ್ರತಿಪಾದಿಸಿದರು.

ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ರಾಜಕುಮಾರ ಬಿರಾದಾರ ಅವರು ವಿಕಲ ಚೇತನ ಉದ್ಯೋಗಿಗಳ ವಿವಿಧ ಸಮಸ್ಯೆಗಳನ್ನು ಎಲೆ ಎಳೆಯಾಗಿ ಬಿಚ್ಚಿಟ್ಟು ಸರಕಾರ ವಿವಿಧ ಇಲಾಖೆ ಹಾಗೂ ಬ್ಯಾಂಕುಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣಗಳು ಕಣ್ಮರೆ ಆಗಿರುವದಕ್ಕೆ ವಿಷಾದಿಸಿದರು. ಮುಂದುವರಿದ ಅವರು ಕ್ರಿಯಾಶೀಲರಲ್ಲದ ಎಸ್ಎಕ್ಯುಟಿವ್ ಸಮಿತಿ ಸದಸ್ಯರು ಕ್ರಿಯಾತ್ಮಕವಾಗಿಲ್ಲದಿದ್ದರೆ ಸಂಸ್ಥೆಗೆ ಹೊರೆಯಾಗುತ್ತಾರಲ್ಲದೆ ಅವರನ್ನು ಸಂಸ್ಥೆಯಿಂದ ಬಿಡುಗಡೆಗೊಳಿಸಲು ಯೋಚಿಸಬೇಕು ಎಂದು ಕರೆ ನೀಡಿದರು .

ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿಕ್ರಮ ಶ್ರೀವಾಸ್ತವ ಅವರು ಸಂಸ್ಥೆಯ ಚಟುವಟಿಕೆ ಮತ್ತು ಸದಸ್ಯತ್ವ ಬೇಡಿಕೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವದಕ್ಕೆ ಹರ್ಷ ವ್ಯಕ್ತಪಡಿಸಿದರಲ್ಲದೆ ನಮ್ಮ ಸಂಸ್ಥೆಯಲ್ಲಿ ವಿಶ್ವಾಸವಿಟ್ಟು ಸದಸ್ಯತ್ವವನ್ನು ಕೋರಿರುವುದಕ್ಕೆ ವಿಕಲಚೇತನ್ರಲ್ಲಿರುವ ಜಾಗೃತಿ ಮನೋಭಾವವೇ ಕಾರಣ ಎಂದು ವಿಶ್ಲೇಷಿಸಿದರು . ಮುಂದುವರಿದ ಅವರು ಸಂಸ್ಥೆಯ ಲೆಖ್ಖಪತ್ರಗಳೆಲ್ಲ ಸಮರ್ಪಕವಾಗಿದು ಆಡಿಟ್ ವರದಿ ಕೂಡಾ ತಯಾರಾಗುತ್ತಿದೆಯಲ್ಲದೆ ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿರುವ ಹಣದ ಬಗ್ಯೆ ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಸಂಘದ ನಿರ್ದೇಸಕರಲ್ಲೊಬ್ಬರಾದ ಶ್ರೀ ಮಧುರ ಮಿಶ್ರ ಮತ್ತು ಶ್ರೀ ಪ್ರವೀಣ್ ಗರ್ಗ್ ಅವರುಗಳು ವಿವಿಧ ವಿಷಯಗಳ ಮೇಲೆ ಬೆಳೆಕು ಚೆಲ್ಲಿದರಲ್ಲದೆ ನಮ್ಮ ಸಂಸ್ಥೆಯಲ್ಲಿ ವಿಶ್ವಾಸ ಇರಿಸಿ ಬಂದಿರುವ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಆಶಿಸಿದರು.

ನೆಟ್ವರ್ಕ್ ಸಮಸ್ಯೆಗಳಿಂದ ಹಲವಾರು ಪದಾಧಿಕಾರಿಗಳು ಭಾಗವಹಿಸಲು ತೊಂದರೆ ಆಗಿರುವುದನ್ನು ಕೂಡಾ ಹಲವಾರು ಸಭೆಯಲ್ಲಿ ಪ್ರಸ್ತಾಪಿಸಿದ್ದು ಗಮನ ಸೆಳೆಯಿತು .

ಸಂಸ್ಥೆಯ ಮಹಿಳಾ ವಿಭಾಗದ ಕಾರ್ಯದರ್ಶಿ ಡಾ. ಟಿ.ಎಂ. ಸುಮನಾ ಅವರು ನೆರೆದಿರುವ ವಿಕಲಚೇತನ ಬಂದುಗಳು, ಪದಾಧಿಕಾರಿಗಳನ್ನು ಅವರಲ್ಲಿರುವ ಸೇವಾ ಭಾವನೆಗಳ ಮುಲಕ ಅಭಿನಂದಿಸಿ ಶುಭ ಹಾರೈಸಿದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಹರಿಯಾಣ ರಾಜ್ಯದ ಅಂಗವಿಕಲರ ಆಯುಕ್ತಾಲಯದ ಮಾಜಿ ಆಯುಕ್ತ ಶ್ರೀ ರಾಜಕುಮಾರ ಮಕ್ಕಾದ ಮತ್ತು ಖಜಾಂತಿ ಶ್ರೀಮತಿ ಟಿ,ಶಿವಮ್ಮ ಮುಂತಾದವರು ಕಾರಣಾಂತರಗಳಿಂದ ಆನ್ಲೈನ್ ಸಭೆಯಲ್ಲಿ ಭಾಗವಹಿಸಲಾಗಲಿಲ್ಲ ಎಂದು ಸಭೆಯ ಗಮನಕ್ಕೆ ತರಲಾಯಿತು.

error: Content is protected !!