ಕರ್ನಾಟಕ ನೀರಾವರಿ ನಿಗಮದ ನಿಯಮಿತ ಸಹಾಯಕ ಕಾರ್ಯಪಾಲಕ ಅಭಿಯಂತರ ಮೀಟರ್ ನಲ್ಲಿ ಪವರ್ ಇಲ್ಲ!

ಕೊಪ್ಪಳ : ಕರ್ನಾಟಕ ನೀರಾವರಿ ನಿಗಮ ನಿಯಮಿತದ (KNNL) ಮುನಿರಾಬಾದ್ ಡ್ಯಾಂ ಪ್ರದೇಶದಲ್ಲಿರುವ ಕೆಲವೊಂದು ವಸತಿಗಳಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವವರು ಲಕ್ಷಾಂತರ ರೂ. ಗಳಷ್ಟು ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ. ಇದೀಗ ಈ ಬಾಕಿ ಮೊತ್ತ ಅಂದಾಜು ₹26 ಲಕ್ಷದ ಗಡಿ ದಾಟಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಮಾವಣೆ ಮಾಡದ ವಿದ್ಯುತ್ ಬಿಲ್ಲುಗಳು ಮತ್ತು ಹತ್ತಾರು ಮೀಟರ್‌ಗಳು ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರ ಹೆಸರಿನಲ್ಲಿ ಇರುವ ಕಾರಣ ಈ ಹೆಸರಿನಲ್ಲಿರುವ ಮೀಟರ್ಗಳ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ತ್ವರಿತ ಕ್ರಮವಾಗಿ ಅಂದಾಜು 86 ವಿದ್ಯುತ್ ಮೀಟರ್‌ಗಳ ಸಂಪರ್ಕ ಕಡಿತ ಮಾಡಿದೆ. ಪರಿಣಾಮವಾಗಿ ಇವುಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಇದರಿಂದಾಗಿ ನಿಗಮದ ವಸತಿಗಳಲ್ಲಿ ಕಾಳಜಿಹೀನವಾಗಿ ವಾಸಿಸುತ್ತಿರುವ ಅನಧಿಕೃತ ನಿವಾಸಿಗಳು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

ಜೆಸ್ಕಾಂನ ವಿದ್ಯುತ್ ಕಡಿತದ ಬಗ್ಗೆ ಮಾತನಾಡಿದ ಅಧಿಕಾರಿಗಳು, “ಸರಕಾರದ ಇಲಾಖೆಯ ಹೆಸರಿನಲ್ಲಿ ದಾಖಲಾಗಿರುವ ಮೀಟರ್‌ಗಳ ಬಿಲ್ ಪಾವತಿ ನಿಯಮಿತವಾಗಿರಬೇಕು. ಬಾಕಿ ಬಿಲ್‌ಗಳನ್ನು ಪಾವತಿಸದ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಾರ್ಯಪಾಲಕ ಅಭಿಯಂತರರ MGAEH 20, ವಿದ್ಯುತ್ ಬಾಕಿ: ರೂಪಾಯಿ 8301 ಗಳಿದ್ದು ಅವರ ವಿದ್ಯುತ್ ಸಹ ಕಡಿತ ಗೊಳಿಸಲಾಗಿದೆ. ಇನ್ನು ಮುಂದೆ ಅಂತಹ ಅನಧಿಕೃತ ಬಳಕೆಗಳಿಗೆ ಮನ್ನಾ ಇರುವುದಿಲ್ಲ,”  ಎಂದು ಹೇಳಿದರು.

error: Content is protected !!