ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಕ್ಕೆ ಜಯ

ಸುಮಾರು ಐದು ದಿನಗಳಿಂದ ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ಮಾನ್ಯ ಸಕ್ಕರೆ ಸಚಿವರಾದ ಶ್ರೀ ಶಿವಾನಂದ ಪಾಟೀಲ ಸಾಹೇಬರ ಪ್ರಯತ್ನ ಮೇರೆಗೆ ಜಯ ಸಿಕ್ಕಿದೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಾರ್ಖಾನೆ ಮಾಲಿಕರ ಮದ್ಯೆ ಒಪ್ಪಂದ ಆಗಿ ರೈತರ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದು ಇದೇ ರೀತಿ ಯಾಗಿ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ನಮ್ಮ ಹೋರಾಟದ ಸ್ಥಳಕ್ಕೆ ಬಂದು ಸರ್ಕಾರದ ಆದೇಶ ಪ್ರತಿ ನೀಡಿದರು ಮತ್ತು ಹಲವಾರು ರೀತಿಯ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದರು ನಂತರ ರೈತ ಮುಖಂಡರಿಂದ ಮತ್ತು ರೈತರಿಂದ ಸಿಹಿ ಹಂಚಿ ವಿಜಯೋತ್ಸವ ಆಚರಿಸಿಲಾಯಿತು …..

.ಈ ಹೋರಾಟದ
ಯಶಸ್ಸಿಗೆ ಕಾರಣರಾದ ಜಿಲ್ಲೆಯ ಮಠಾಧಿಶರಿಗೂ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿಗಳಿಗೂ ಎಲ್ಲ ಪೋಲಿಸ್ ಇಲಾಖೆಯ ಅಧಿಕಾರಿಗಳಗೂ ಸಿಬ್ಬಂದಿಗಳಿಗೂ ಮತ್ತು ಸತತ ಐದು ದಿನಗಳಿಂದ ಸುದ್ದಿ ಬಿತ್ತರಿಸಿದ ಎಲ್ಲ ಮಾಧ್ಯಮ ಮಿತ್ರರಿಗೂ ಸಹಕರಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳಗೂ ಕನ್ನಡಪರ ಸಂಘಟನೆ ದಲಿತಪರ ಸಂಘಟನೆಯ ಮತ್ತು ಪ್ರಗತಿ ಪರ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳಿಗೂ ಹಾಗೂ ವಕೀಲರ ಸಂಘದ ಸದಸ್ಯರಿಗಳಿಗೂ ವಿದ್ಯಾರ್ಥಿಗಳಿಗೂ ಎಲ್ಲ ರೈತರಿಗೂ ಅನಂತ ಕೋಟಿ ಕೃತಜ್ಞತೆಗಳು ಎಂದು

ರಾಹುಲ್ ಕುಬಕಡ್ಡಿ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು

ಕಲ್ಲು ಸೊನ್ನದ ,
ರಾಜ್ಯ ಉಪಾಧ್ಯಕ್ಷರು

ಸಂಗಮೇಶ ಸಗರ
ಜಿಲ್ಲಾಧ್ಯಕ್ಷರು, ವಿಜಯಪುರ
ಹಾಗೂ ಎಲ್ಲಾ ಪದಾಧಿಕಾರಿಗಳು
ವಿಜಯಪೂರ ಜಿಲ್ಲಾ ವರದಿಗಾರ ಅಜೀಜ ಪಠಾಣ.

error: Content is protected !!