ವಿಜಯಪುರ : ಸಂಜೆ ಬಳಿಕ ಹಾಸ್ಟೇಲ್ ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸುವಂತಿಲ್ಲ ಎಂಬ ನಿಯಮ ಇದ್ದಾಗಲೂ ಕೂಡಾ ಹಾಸ್ಟೇಲ್ ವಿದ್ಯಾರ್ಥಿನಿಯರನ್ನು ಹೊಟೇಲ್ಗೆ ಕರೆದೊಯ್ದು ಖುದ್ದು ಹಾಸ್ಟೆಲ್ ವಾರ್ಡನ್ ಪಾರ್ಟಿ ಮಾಡಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿತ್ತು.
ಕುಕ್ ಬರ್ಥಡೇ ಹಿನ್ನೆಲೆ ಹಾಸ್ಟೆಲ್ ಹುಡುಗಿಯರನ್ನು ರಾತ್ರಿ ವೇಳೆ ಹೊಟೇಲ್ ಗೆ ಕರೆದೊಯ್ದು ಡಾನ್ಸ್, ಪಾರ್ಟಿ ಮಾಡಿದ್ದಾರೆ. ಮಾರುತಿ ಕಾಲೋನಿಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ಶಕುಂತಲಾ ರಜಪೂತ ಇವರು ಹಾಸ್ಟೆಲ್ ಕುಕ್ ರಿಜ್ವಾನ್ ಮುಲ್ಲಾ ಭರ್ಜರಿ ಬರ್ಥಡೇ ಪಾರ್ಟಿ ಮಾಡಿದ್ದರು. ಸಂಜೆ ಹಾಸ್ಟೇಲ್ ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸುವಂತಿಲ್ಲ ಎಂಬ ನಿಯಮವಿದ್ರೂ ಕೂಡಾ ಬೇಲಿಯೇ ಎದ್ದು ಹೊಲ ಮೇಯ್ದಂತೆ ಹಾಸ್ಟೇಲ್ ವಾರ್ಡನ್ ಹಾಗೂ ಕುಕ್ ವರ್ತಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ವಿಸ್ತೃತ ವರದಿ ಪ್ರಸಾರವಾದ ಬಳಿಕ ವಿಜಯಪುರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಡಿಡಿಯಾಗಿರುವ ಮಹೇಶ ಪೊತದಾರ ಲೇಡಿ ವಾರ್ಡನ್ಗೆ ನೊಟಿಸ್ ಜಾರಿಗೆ ಮಾಡಿದ್ದಾರೆ. ನೋಟಿಸ್ ಜಾರಿ ಮಾಡಿ ಉತ್ತರಿಸಲು ಕಾಲಾವಕಾಶ ನೀಡಿದ್ದಾರೆ.