“ಪಟ್ಟಣದ ಆಸ್ಪತ್ರೆ, ವಸತಿ ಶಾಲೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳ ಬೇಟಿ “

ಕೊಲ್ಹಾರ: ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ರವಿವಾರ ಬಿ ಎಸ್ ಪಾಟೀಲ್ ಲೋಕಾಯುಕ್ತ ನ್ಯಾಯಮೂರ್ತಿಗಳು ಬೆಂಗಳೂರು ರವರು ಎರಡು ಕಡೆ ಬೇಟಿ ನೀಡಿದರು.

ಪಟ್ಟಣದ ‌ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರುಗಳ ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಪಡೆದು ಕೊಂಡರು ನಂತರ ದಾಖಲೆಗಳನ್ನು ಪರಿಶೀಲಿಸಿದರು ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಎಸ್ ಎಂ ಪಾಟೀಲ ಹಾಗೂ ಅರುಣ ಗಾಣಿಗೇರ ಹಾಜರಿದ್ದರು.

ನಂತರ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ನ್ಯಾಯಮೂರ್ತಿಗಳು ಭೇಟಿ ನೀಡಿ ಅಲ್ಲಿನ ಶಾಲಾ ಮೈದಾನದಲ್ಲಿ ನೀರು ಹೊರಹಾಕಲು ಪರಿಸರ ಕಾಪಾಡಬೇಕು ಎಂದು ತಿಳಿಸಿದರು ನಂತರ ಮಕ್ಕಳೊಂದಿಗೆ ಊಟ ಮಾಡಿ ಶಿಕ್ಷಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಸಲಹೆ ಸೂಚನೆಗಳನ್ನು ನೀಡಿದರು ಈ ಸಂದರ್ಭದಲ್ಲಿ ಶಿಕ್ಷಕ ಸಂಜೂ ದೀವಟಗಿ, ಲಕ್ಷ್ಮಣ ಬ್ಯಾಲ್ಯಾಳ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ : ರವಿಕುಮಾರ್ ತುಪ್ಪದ ಕೊಲ್ಹಾರ

error: Content is protected !!