ಹುಣಸಗಿ : ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗ್ರೇಡ್ 2 ತಹಸೀಲ್ದಾರ್ ಮಲ್ಲಯ್ಯ ದಂಡೋರ್ ಇಂದಿನ ಯುವ ಪೀಳಿಗೆಗೆ ನಾರಾಯಣ ಗುರುಗಳ ಮಾರ್ಗದರ್ಶನ ಅತ್ಯಗತ್ಯ, ಅವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕೆಂದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ದ್ಯಾಮನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಬಸವರಾಜ ಬೊಮ್ಮಗುಡ್ಡ, ನಾರಾಯಣ ಗುರುಗಳು ಸ್ತ್ರೀಯರ ಶೋಷಣೆ, ಅಸ್ಪೃಶ್ಯತೆ ಅಸಮಾನತೆಯ ವಿರುದ್ದ ಹೋರಾಡಿದರು 19ನೇ ಶತಮಾನದ ಕಾಲಾವಧಿಯಲ್ಲಿ ಕೆಳ ವರ್ಗ, ಅಸ್ಪೃಶ್ಯರಿಗೆ, ಶೋಷಿತರಿಗೆ, ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲ, ಇಂತಹ ಸಂದರ್ಭದಲ್ಲಿ ಈ ಸಮಾಜಗಳಿಗೆ ಸ್ವತಃ ದೇವಾಲಯಗಳನ್ನು ನಿರ್ಮಿಸಿ, ಶಿವಲಿಂಗಗಳನ್ನು ಸ್ಥಾಪಿಸಿ ಪ್ರವೇಶ ನೀಡಿದರು.ಹಾಗೂ ಸಮಾಜದ ಒರೆ ಕೋರೆ ಗಳನ್ನು ತಿದ್ದಿ ಸಮಾಜದ ಸಮಾನತೆಗಾಗಿ ಅವಿರತ ಪರಿಶ್ರಮ ಹಾಕಿ ಹೋರಾಟ ಮಾಡಿದ ಮಹಾನ ಚೇತನವಾಗಿದ್ದರು, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಇವರ ದ್ಯೇಯವಾಕ್ಯವಾಗಿತ್ತು.
ಇವರ ಆದರ್ಶಗಳು ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಗುತ್ತೇದಾರ, ಉಪಾಧ್ಯಕ್ಷರಾದ ಹಳ್ಳೆಪ್ಪ ಗುತ್ತೇದಾರ, ಸೂರ್ಯನಾರಾಯಣ ರೆಡ್ಡಿ, ನಾಗಯ್ಯ ಗುತ್ತೇದಾರ ಹಾಗೂ ಮುಖಂಡರಾದ ಮಲ್ಲಯ್ಯ ಗುತ್ತೇದಾರ ಹೆಬ್ಬಾಳ, ಬಸಯ್ಯ ಗುತ್ತೇದಾರ ಕಲ್ಲದೇವನಹಳ್ಳಿ, ನಿಂಗಯ್ಯ ಗುತ್ತೇದಾರ ಗೆದ್ದಲಮರಿ, ಮಲ್ಲಯ್ಯ ನಾರಾಯಣಪುರ, ಮಲ್ಲಯ್ಯ ಕೂಡಲಗಿ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳ ಮುಖಂಡರು ಯುವಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಗುತ್ತೇದಾರ ಸ್ವಾಗತಿಸಿದರು, ರಂಗಯ್ಯ ಗುತ್ತೇದಾರ ನಿರೂಪಿಸಿದರು, ಯಲ್ಲಯ್ಯ ಗುತ್ತೇದಾರ ವಂದಿಸಿದರು.
ಫೋಟೋ 7ಹೆಚ್ ಯುಎನ್ 01
ಹುಣಸಗಿ : ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಮಲ್ಲಯ್ಯ ದಂಡೋರ ಇದ್ದರು.
ವಿವಿಧಡೆ ಜಯಂತಿ ಆಚರಣೆ
ಹುಣಸಿಗಿ ಪಟ್ಟಣದ ಸ್ಪಂದನ ಪಬ್ಲಿಕ್ ಶಾಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಾರಾಯಣ ಗುರುಗಳ ಜಯಂತಿಯ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಗುತ್ತೇದಾರ, ಮುಖ್ಯ ಶಿಕ್ಷಕಿ ಸೌಂದರ್ಯ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.