ಬೀದರ ಸುರಿದ ಭಾರಿ ಮಳೆಯಿಂದ ರೈತರು ಬೆಳೆದ ಬೇಳೆ ಬಹಳಷ್ಟು ಹಾನಿಯಾಗಿದ್ದು ಕೂಡಲೆ ಸರ್ವೆ ನಡೆಸಿ ರೈತರಿಗೆ ಪ್ರತಿ ಎಕರೆಗೆ 25 ರಿಂದ 30 ಸಾವಿರ ಪರಿಹಾರ ನೀಡಲು ಯುವ ಕ್ರಾಂತಿ ಆಗ್ರಹ

ಬೀದರ ಜಿಲ್ಲೆಯಲ್ಲಿ ಆಗಸ್ಟ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ರೈತರು ಬೆಳೆದ ಬೇಳೆ ಅತಿವೃಷ್ಟಿಯಿಂದಾಗಿ ಹೆಸರು, ಉದ್ದು, ತೊಗರಿ, ಸೋಯಾಬೀನ್ ಸೇರಿದಂತೆ ಸಾವಿರಾರು ಎಕರೆಯ ಬೆಳೆ ಹಾನಿಯಾಗಿದ್ದು, ನೂರಾರು ಮನೆಗಳು, ರಸ್ತೆ–ಸೇತುವೆಗಳು ಹಾಗೂ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ ಹಾಳಾಗಿದೆ, ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ.

ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯ ಪ್ರಾಥಮಿಕ ಅಂದಾಜಿನಂತೆ ಸುಮಾರು ₹500 ಕೋಟಿ ರೂ. ನಷ್ಟ ಸಂಭವಿಸಿದೆ.

ಈ ಕಷ್ಟದ ಸಮಯದಲ್ಲಿ ಜಿಲ್ಲೆಯ ರೈತರು, ಕೂಲಿಕಾರ್ಮಿಕರು ಹಾಗೂ ಬಡಜನರಿಗೆ ಸರ್ಕಾರ ತಕ್ಷಣ ನೇರವಿಗೆ ಬರಬೇಕು.
ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿದೆ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳಾದ ಉದ್ದು.ಹೇಸರು, ಸೋಯಾ,ತೋಗರಿ ವಿವಿಧ ಬೇಳೆಗಳು ನೆಲಕಚ್ಚಿದು ರೈತರು ಸಂಕಷ್ಟದಲ್ಲಿ ದಿನದುಡುವಂತೆ ಮಾಡಿದೆ.ಮಳೆಯಿಂದ ರೈತರ ಹೋಲದಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಹೋಗಿದೆ‌.ಸರ್ಕಾರ ಕೂಡಲೆ ಈ ಕಡೆ ಗಮನ ಹರಿಸಿ ಸರ್ವೆ ನಡೆಸಿ ಪ್ರತಿ ಎಕರೆಗೆ 25 ರಿಂದ 30 ಸಾವಿರ ಪರಿಹಾರ ವಿತರಿಸಬೇಕು.ಹಾಗೆ ಬೀದರ ಜಿಲ್ಲೆಯಲ್ಲಿ ಎಷ್ಟು ರೈತರು ವಿಮೆ ಮಾಡಿಸಿದ್ದಾರೆ. ಅಷ್ಟು ರೈತರಿಗೆ ಸೂಕ್ತ ವಿಮಾ ಮೊತ್ತ ಜಮಾ ಆಗುವಂತೆ ಕ್ರಮ ಕೈಗೊಳ್ಳಬೇಕು. ಹಾಗೆ ಬೀದರ ಡಿಸಿಸಿ ಬ್ಯಾಂಕ ನಿಂದ ರೈತರಿಗೆ ಸಾಲ ಸಿಗದೆ ಇದ್ದುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಆದ್ದರಿಂದ ರೈತರಿಗೆ ಬೀದರ ಡಿಸಿಸಿ ಬ್ಯಾಂಕನಿಂದ ಸಾಲ ಕೊಡಿಸುವ ಕೇಲಸ ಆಗಬೇಕು.ಹಾಗೆ ಬೀದರ ಜಿಲ್ಲೆಯ ರೈತರ ಜೀವನಾಡಿ ಆಗಿರುವ BSSK ಸಹಕಾರ ಸಕ್ಕರೆ ಕಾರ್ಖಾನೆ ಬಂದ ಆಗಿರುವುದರಿಂದ ರೈತರು ,ಮತ್ತು ಅಲ್ಲಿ ಕೇಲಸ ಮಾಡುವ ಕೂಲಿ ಕಾರ್ಮಿಕರು, ಸಂಕಷ್ಟಕ್ಕೆ ಒಳಗಾಗಿದ್ದಾರೆ.ಆದ್ದರಿಂದ ಸರ್ಕಾರದ ಕೂಡಲೆ ಮುತುವರ್ಜಿ ವಹಿಸಿ ಆದಷ್ಟು ಬೇಗ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು ಎಂದು ಯುವ ಕ್ರಾಂತಿ ಸಂಘಟನೆಯ ವತಿಯಿಂದ ಒತ್ತಾಯಿಸಿದರು ಒಂದು ವೇಳೆ ಈ ಎಲ್ಲಾ ಸಮಸ್ಯೆಗಳನ್ನ ಈಡೇರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.

ಸಂಗಮೇಶ ಭೂರೆ ಯುವ ಕ್ರಾಂತಿ ಸಂಘಟನೆ ಜಿಲ್ಲಾಧ್ಯಕ್ಷರು ಬೀದರ.
ರಾಜಕುಮಾರ ಹಳ್ಳಿಖೇಡಕರ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ .
ಮನೊಜ ಮಾನೆ.ಪಪ್ಪುರಾಜ ಚತುರೆ,ಮಹೇಶ ಕಟ್ಟಿಮನಿ ,ದಯಾನಂದ ಸ್ವಾಮಿ, ಕರಣ ಜಾನವಿರ,ಅರುಣ ಮನಕೋಜಿ, ಸಾಲೋಮಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!