ಬೀದರ ಜಿಲ್ಲೆಯ ಔರಾದ (ಬಿ) ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಮನೆ ಹಾಗೂ ಗೋದಾಮಿನಲ್ಲಿ ಯಾವುದೇ ಅನುಮತಿ ಇಲ್ಲದೆ, ಸುರಕ್ಷತೆ ನಿಯಮಗಳನ್ನು ಅನುಸರಿಸದೇ ಅನಧಿಕೃತವಾಗಿ, ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದು, ಅದರ ಮೇಲೆ ದಾಳಿ ಮಾಡಿ 3 ಜನರನ್ನು ಬಂಧಿಸಿ ಅವರ ವಶದಿಂದ 32,180/-ರೂ. ಪಟಾಕಿ ಜಪ್ತಿ ಮಾಡಿ ಔರಾದ (ಬಿ) ಪೊಲೀಸ್ ಠಾಣೆಯಲ್ಲಿ ಅಪರಾಧ ಸಂ: 130/2025 ಕಲಂ 288 ಬಿ.ಎನ್.ಎಸ್ ಹಾಗೂ 9(ಬಿ)(1)(ಬಿ) ಎಕ್ಸ್ ಪ್ಲೋಸಿವ್ ಕಾಯ್ದೆ-1884 ಯಂತೆ ಪ್ರಕರಣ ದಾಖಲಿಸಲಾಗಿದೆ.
ದಿನಾಂಕ 24-09-2025 ರಂದು ಔರಾದ (ಬಿ) ಪಟ್ಟಣದಲ್ಲಿ ಒಂದು ಮನೆ ಹಾಗೂ ಗೋದಾಮಿನಲ್ಲಿ ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದೆ, ಯಾವುದೆ ಸುರಕ್ಷತೆ ನಿಯಮಗಳನ್ನು ಅನುಸರಿಸದೆ, ಅನಧಿಕೃತವಾಗಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪ್ರದೀಪ ಗುಂಟಿ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು, ಬೀದರ ಜಿಲ್ಲೆ, ರವರ ನಿರ್ದೇಶನದಂತೆ, ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೀದರ-1, ಪವಾಡ ಶೆಟ್ಟಿ, ಪೊಲೀಸ್ ಉಪಾಧೀಕ್ಷಕರು, ಭಾಲ್ಕಿ, ಹಾಗೂ ರಘುವೀರ ಸಿಂಗ್ ಠಾಕೂರ ಸಿಪಿಐ ಔರಾದ (ಬಿ) ವೃತ್ತ ರವರ ಮಾರ್ಗದರ್ಶನದಲ್ಲಿ ರೇಣುಕಾ ಪಿಎಸ್‌ಐ ಔರಾದ (ಬಿ) ಪೊಲೀಸ್ ಠಾಣೆ ರವರು ಪಂಚನಾಮೆ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು ಪೊಲೀಸ್ ಸಿಬ್ಬಂದಿಯವರೊಂದಿಗೆ ಔರಾದ (ಬಿ) ಪಟ್ಟಣದ ಟೀಚರ್ ಕಾಲೋನಿಯಲ್ಲಿದ್ದ ಮನೆಯ ಮೇಲೆ ಹಾಗೂ ಗೋದಾಮಿನ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗಿ ಮನೆಯಲ್ಲಿ ಒಟ್ಟು 32,180/- ರೂ ಮೌಲ್ಯದ ಪಟಾಕಿಗಳನ್ನು ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದೆ, ಯಾವುದೆ ಸುರಕ್ಷತೆ ನಿಯಮಗಳನ್ನು ಅನುಸರಿಸದೆ, ಅನಧಿಕೃತವಾಗಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತಪಡಿಸಿಕೊಂಡು 03 ಜನ ಆರೋಪಿತರನ್ನು ದಸ್ತಗಿರಿ ಮಾಡಿ, ಮುದ್ದೆ ಮಾಲನ್ನು ಜಪ್ತಿ ಮಾಡಿಕೊಂಡು ಔರಾದ (ಬಿ) ಪೊಲೀಸ್ ಠಾಣೆಯಲ್ಲಿ ಅಪರಾಧ ಸಂ: 130/2025 ಕಲಂ 288 ಬಿ.ಎನ್.ಎಸ್ ಹಾಗೂ 9(ಬಿ)(1)(ಬಿ) ಎಕ್ಸ್ ಪ್ಲೋಸಿವ್ ಕಾಯ್ದೆ-1984 ರಂತೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ವರದಿ : ರಾಚಯ್ಯ ಸ್ವಾಮಿ