ಗಣತಿ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕಿ ಹದಗೆಟ್ಟ ರಸ್ತೆಯಲ್ಲಿ ಸ್ಕೂಟಿಯಿಂದ ಬಿದ್ದು ಸಾವು

ಬಾಗಲಕೋಟೆ: ಗಣತಿ ಕಾರ್ಯಕ್ಕೆ ಹೋದ ಶಿಕ್ಷಕಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ ತಾಲೂಕಿನ ತಿಮ್ಮಾಪೂರ ಕ್ರಾಸ್ ಬಳಿ ಸಂಭವಿಸಿದೆ.

ರಾಂಪೂರ ಹತ್ತಿರದ ಸೀತಿಮನಿ ಗ್ರಾಮದಿಂದ ಗಣತಿ ಕಾರ್ಯವನ್ನ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ದಾನಮ್ಮ ವಿಜಯಕುಮಾರ ನಂದರಗಿ (ವಯಸ್ಸು 52) ಎಂಬವರು ತಮ್ಮ ಮಗನೊಂದಿಗೆ ಬೈಕಿನಲ್ಲಿ ಮನೆಗೆ ಬರುತ್ತಿದ್ದಾಗ ಹದಗೆಟ್ಟ ರಸ್ತೆಯಿಂದ ಬೈಕ್ ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬಿದ್ದು ಅವರು ಸಾವನ್ನಪ್ಪಿದ್ದಾರೆ.

ಮೃತ ಶಿಕ್ಷಕಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ವಂದಾಲ ಗ್ರಾಮದವರು. ಬಾಗಲಕೋಟೆ ತಾಲ್ಲೂಕಿನ ರಾಂಪೂರ ಸರ್ಕಾರಿ ಆಶ್ರಯ ಕಾಲೋನಿ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ಬಾಗಲಕೋಟೆಯಲ್ಲಿ ವಾಸವಿದ್ದರಿಂದ ಗಣತಿ ಕಾರ್ಯ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

error: Content is protected !!