ಸಮೀಕ್ಷೆಗೆ ಸಿಗದ ನೆಟ್ವರ್ಕ್ ಮರ ಹತ್ತಿದ ಶಿಕ್ಷಕ

ಬೀದರ್ ಜಿಲ್ಲೆ ಹುಲಸುರು ತಾಲೂಕಿನ ಮಿರ್ಕಲ್ ಗ್ರಾಮದಲ್ಲಿ ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗಾಗಿ ಮೊಬೈಲ್ ಗೆ ನೆಟ್ವರ್ಕ್ ಸಿಗದ ಕಾರಣ ಸಮೀಕ್ಷೆಗೆ ನಿಯುಕ್ತಿ ಗೊಂಡ ಶಿಕ್ಷಕರೋಬರು ನೆಟ್ವರ್ಕ್ ಗಾಗಿ ಮರ ಹತ್ತಿದ ಪ್ರಸಂಗ ನಡೆಯಿತು.

ಶಿಕ್ಷಕ ಗೋವಿಂದ ಮಹಾರಾಜ್ ನೆಟ್ವರ್ಕ್ ಸಿಗದ ಹಿನ್ನೆಲೆ ಶಿಕ್ಷಕ ಮರ ಹತ್ತಿದ್ದಾರೆ ಆದರೆ ಮರ ಹತ್ತಿದ ನಂತರವೂ ಸಹ ಸರಿಯಾದ ನೆಟ್ವರ್ಕ್ ಸಂಪರ್ಕ ಸಿಗದೇ ನೆರೆಯ ಮಹಾರಾಷ್ಟ್ರದ ನೆಟ್ವರ್ಕ್ ಸಿಗುತ್ತಿತ್ತು ಎನ್ನಲಾಗಿದೆ ಹೀಗಾಗಿ ಶಿಕ್ಷಕ ಮರದಿಂದ ಕೆಳಗೆ ಇಳಿವಂತಾಗಿದೆ ಎಂದು ತಿಳಿದು ಬಂದಿದೆ.

ಶಿಕ್ಷಕ ಮರ ಹತ್ತಿರುವ ಬಗ್ಗೆ ತಹಶೀಲ್ದಾರ್ ಶಿವಾನಂದ್ ಮೇತ್ರಿ ಅವರನ್ನು ಸಂಪರ್ಕಿಸಿದಾಗ ಹುಲಸೂರು ತಾಲೂಕಿನಲ್ಲಿ ನೆಟ್ವರ್ಕ್ ಸಮಸ್ಯೆ ಇಲ್ಲ ಸಮೀಕ್ಷೆಗಾಗಿ ಇರುವ ಯಾಪ್ ನಲ್ಲಿ ಕೆಲ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದು ಸಮಸ್ಯೆ ನಿವಾರಣೆಗಾಗಿ ನಮ್ಮ ತಾಂತ್ರಿಕ ಪರಿಣಿತ ತಂಡ ಸಮಸ್ಯ ಪರಿಹಾರಕ್ಕೆ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.

error: Content is protected !!