ಕಾಳಗಿ ತಾಲೂಕಿನ ರಟಕಲ ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿ ಬರುವ ಮುಕರಂಭ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಮುತ್ತ ಹಾವು ಕ್ರಿಮಿ ಕಿಟಕಗಳು ಕಾಣಿಸಿಕೊಂಡಿದ್ದು ಮಕ್ಕಳಲ್ಲಿ ಭಯ ಉಂಟು ಮಾಡಿದೆ. ಅದರಿಂದ ಸಂಬಂಧ ಪಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ ತೇಲಿ ಮತ್ತು ಕಾಳಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸಲಿಂಗಪ್ಪ ಡಿಗ್ಗಿ ರವರಿಗೆ ಹೇಳಿದರು ಕೂಡ ಯಾವದ ರೀತಿ ಶಾಲೆಯ ಸುತ್ತ ಮುತ್ತಲಿನ ಕೆಲಸ ಮಾಡಿಸಿರುವದಿಲ್ಲ.ಅದಕ್ಕಾಗಿ ಅತಿ ಶೀಘ್ರದಲ್ಲಿ ಶಾಲೆಯ ಸುತ್ತ ಮುತ್ತಲಿನ ಬೆಳದಿರುವ ಗಿಡ ಗಂಟಿಗಳು ಸ್ವಚ್ಛತೆ ಮಾಡದಿದ್ದಲ್ಲಿ ರಟಕಲ್ ಗ್ರಾಮ ಪಂಚಾಯತ್ ಮುತ್ತಿಗೆ ಹಾಕಿ ಹೋರಾಟ ಮಾಡುತೇವೆ ಎಂದು ವಿಷ್ಣುಸ್ವಾಮಿ ಜಿಲ್ಲಾ ಅಧ್ಯಕ್ಷರು ಅಗ್ರಹಿಸಿದ್ದಾರೆ.
ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ