ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಹಲವಾರು ಗ್ರಾಮಗಳಲ್ಲಿ ಕಾಮರಿಗೆ ಚಾಲನೆ

ಯಮಕನಮರಡಿ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರ ಅನುದಾನದಲ್ಲಿ ಸಚಿವರ ಸೂಚನೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ

1)ಪಾಶ್ಚಪೂರ. ಗ್ರಾಮದಲ್ಲಿ 40. ಲಕ್ಷ ವೆಚ್ಚದಲ್ಲಿ ಸಿ ಸಿ ರಸ್ತೆ ನಿರ್ಮಾಣ.

2) ರುಸ್ತುಂಪೂರ. ಗ್ರಾಮದಲ್ಲಿ 20. ಲಕ್ಷ ವೆಚ್ಚದಲ್ಲಿ ಸಿ ಸಿ ರಸ್ತೆ ಹಾಗೂ ಚರಂಡಿ

3)ಕರಗುಪ್ಪಿ. ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಸಿ ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮತ್ತು 36 ಲಕ್ಷ ವೆಚ್ಚದ ಎರಡು ಶಾಲಾ ಕೊಠಡಿಗಳು

4) ಅರಳಿಕಟ್ಟಿ. ಗ್ರಾಮದಲ್ಲಿ 20 ಲಕ್ಷ ವೆಚ್ಚದಲ್ಲಿ ಸಿ ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ

5)ಹಳ್ಳಿ ವಂಟಮೂರಿ. ಪಾಚ್ಚಾಪೂರ ರೈಲ್ವೆ ಸ್ಟೇಷನನಿಂದ ಕಲ್ಲಟ್ಟಿ ಜಾರಕಿಹೊಳಿ ಬೀರನಹೂಳ್ಳಿ ಕಟಾಬಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿ ವರಿಗೆ 4 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮತ್ತು ಅಗಲೀಕರಣ

6)ಬಸ್ಸಾಪೂರ. ಗ್ರಾಮದಲ್ಲಿ 3.ಕೋಟಿ ವೇಚ್ಚದ ರಸ್ತೆ ಡಾಂಬರೀಕರಣ ಮತ್ತು 20 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣ.

7) ಶಹಾಬಂದರ್. ಗ್ರಾಮದಲ್ಲಿ 20 ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ನಿರ್ಮಾಣ.

8) ಚಿಕ್ಕಲದಿನ್ನಿ. 50. ಲಕ್ಷ ವೆಚ್ಚದ ಶಹಾ ಬಂದರ್ ಹಾಗೂ ಹೊಸ ವಂಟಮೂರಿ
ಗ್ರಾಮಕ್ಕೆ ಹೋಗುವ ರಸ್ತೆ ರಕ್ಷಣಾ ಗೋಡೆ ನಿರ್ಮಾಣ.

ಕಾಮಗಾರಿಗಳಿಗೆ ಗುದ್ದಲಿ ಪೂಜಾ ಕಾರ್ಯಕ್ರಮವನ್ನು ಜನಪ್ರತಿನಿಧಿಗಳು ಊರಿನ ಹಿರಿಯರು ಗ್ರಾಮಸ್ಥರು ಮುಖಂಡರು ಜೊತೆಗೂಡಿ ನೆರವೇರಿಸಿದ್ದುರು.

ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರು ಜನಪ್ರತಿನಿಧಿಗಳು ಊರಿನ ಹಿರಿಯರು ಗ್ರಾಮಸ್ಥರು ಮುಖಂಡರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!