ದಿನಾಂಕ:25/11/2025 ರಂದು ಪಿರ್ಯಾದುದಾರರು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಹಾಜರಾಗಿ ಹಲವು ದಿನಗಳಿಂದ ಇಬ್ಬರು ವ್ಯಕ್ತಿಗಳು ಮಲ್ಲೇಶ್ವರಂನ 10 ನೇ ಕ್ರಾಸ್ ಮತ್ತು ಸಂಪಿಗೆ ರಸ್ತೆಯ ಸುತ್ತಮುತ್ತ ನಕಲಿ ಐಟಿಸಿ ಸಿಗರೇಟ್ಗಳನ್ನು ಸಾರ್ವಜನಿಕರಿಗೆ ಅಸಲಿ ಸಿಗರೇಟ್ಗಳೆಂದು ಎಂದು ನಂಬಿಸಿ ಅಕ್ರಮವಾಗಿ ಮಾರಾಟ ಮತ್ತು ವಿತರಣೆಯಲ್ಲಿ ತೊಡಗಿರುತ್ತಾರೆಂದು ತಿಳಿಸಿದ್ದು, ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೂಂಡು ಭಾತ್ಮಿದಾರರಿಂದ ಮಾಹಿತಿಯನ್ನು ಕಲೆಹಾಕಿ ದಿನಾಂಕ:25/11/2025 ರಂದು ಮಲ್ಲೇಶ್ವರಂ 10 ನೇ ಕ್ರಾಸ್ ಬಳಿ ಇಬ್ಬರೂ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ ಆರೋಪಿತರುಗಳು ಕಾಸರಗೋಡಿನ ಅಪರಿಚಿತ ವ್ಯಕ್ತಿಯಿಂದ ನಕಲಿ ಸಿಗರೇಟ್‌ಗಳನ್ನು ತಂದು ಮಲ್ಲೇಶ್ವರಂ ಸುತ್ತ-ಮುತ್ತ ಹಾಗೂ ಸಂಪಿಗೆ ರಸ್ತೆಯಲ್ಲಿ ಅಸಲಿ ಸಿಗರೇಟ್‌ಗಳೆಂದು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ತಪ್ಪೋಪ್ಪಿಕೊಂಡಿರುತ್ತಾರೆ.
ನಂತರ ಆರೋಪಿತರುಗಳ ವಶದಲ್ಲಿದ್ದ, ಗೋಲ್ಡ್ ಪ್ಲೇಕ್ ಲೈಟ್ಸ್ನ 35 ಬಂಡಲ್‌ಗಳು ಮತ್ತು ಗೋಲ್ಡ್ ಪ್ಲೇಕ್ ಕಿಂಗ್ಸ್ ಕಂಪನಿಯ 44 ಬಂಡಲ್‌ಗಳು ಹಾಗೂ ಮಿನಿ ಗೋಲ್ಡ್ ಪ್ಲೇಕ್ 01 ಬಂಡಲ್ ಒಟ್ಟು 80 ಬಂಡಲ್ ಸೀಗರೇಟ್‌ಗಳನನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ ₹ 2,50,000/- ಆಗಿರುತ್ತದೆ. ನಂತರ ಆರೋಪಿಗಳಿಗೆ ನೋಟಿಸ್ ನೀಡಿ ಕಳುಹಿಸಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಶ್ರೀ.ಬಿ.ಎಸ್.ನೇಮಗೌಡ ಐ.ಪಿ.ಎಸ್, ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ, ಶ್ರೀ.ಕೃಷ್ಣಮೂರ್ತಿ ಹೆಚ್, ಸಹಾಯಕ ಪೊಲೀಸ್ ಆಯುಕ್ತರು ಮಲ್ಲೇಶ್ವರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಮಲ್ಲೇಶ್ವರಂ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಜಗದೀಶ್, ಬಿ.ಆರ್. ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಆರೋಪಿತರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
