ಸರ್ಕಾರಿ ಶಾಲೆಗೆ ನೂತನ ಶಾಲಾ ಅಭಿವೃದ್ಧಿ ಸಮಿತಿ ರಚನೆ ಬಸವರಾಜ ಲಬ್ಬಿ ಅಧ್ಯಕ್ಷರು ,ಹಾಗೂ ಲಕ್ಷ್ಮಿ ಅಡಿವೆಪ್ಪಾ ನಾಯಿಕ ಉಪಾಧ್ಯಕ್ಷೆ

ಹುಕ್ಕೇರಿ ಸ್ಥಳೀಯ ಶಾಸಕರಾದ ನಿಖಿಲ ಉಮೇಶ ಕತ್ತಿ ಯವರ ಆದೇಶದ ಮೇರೆಗೆ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC)ಯನ್ನು ರಚಿಸಲಾಗಿದೆ.

ಈ ಕುರಿತು ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಸಮಿತಿಯ ಅಧ್ಯಕ್ಷರಾಗಿ * ಬಸವರಾಜ ಅಣ್ಣಾಸಾಹೇಬ ಲಬ್ಬಿ* ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿ ಅಡಿವೆಪ್ಪಾ ನಾಯಿಕ* ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಶಾಲೆಯ ಶೈಕ್ಷಣಿಕ ಪ್ರಗತಿ, ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ಮಧ್ಯಾಹ್ನದ ಬಿಸಿಯೂಟ, ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಶಾಲಾಭಿವೃದ್ಧಿ ಕಾರ್ಯಗಳಲ್ಲಿ ಈ ನೂತನ ಸಮಿತಿ ಪ್ರಮುಖ ಪಾತ್ರ ವಹಿಸಲಿದೆ.

ನೂತನ ಸಮಿತಿಯ ಸದಸ್ಯರು:
1. ಈರಣಗೌಡ ಬಸಗೌಡ ಮುದಗೌಡಿ – ಸದಸ್ಯರು
2. ರಾಜು ಬಾಳಪ್ಪಾ ಹಾಲಟ್ಟಿ – ಸದಸ್ಯರು
3 ಗಂಗವ್ವಾ ಪ್ರವೀಣ ದಂಡಗಿ – ಸದಸ್ಯರು
4. ನಂದಾ ಪರಪ್ಪಾ ಮಸರಗುಪ್ಪಿ – ಸದಸ್ಯರು
5. ಭೀಮಪ್ಪ ಬಸಪ್ಪಾ ಶಿರಹಟ್ಟಿ – ಸದಸ್ಯರು
6. ಬಸವರಾಜ ರಾಯಪ್ಪಾ ಕರೆಪ್ಪಗೊಳ- ಸದಸ್ಯರು
7. ರಾಜು ಚನ್ನಪ್ಪ ರಾಜಾಪುರಿ – ಸದಸ್ಯರು

ನೂತನ ಸಮಿತಿಯ ಎಲ್ಲ ಸದಸ್ಯರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

error: Content is protected !!