ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100% ಫಲಿತಾಂಶ – ಮುಖ್ಯಸ್ಥರಿಗೆ ಸನ್ಮಾನ
ಹುಕ್ಕೇರಿ: ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಾರ್ಯಾಲಯ ಧಾರವಾಡ, ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಚಿಕ್ಕೋಡಿ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹುಕ್ಕೇರಿ ಇವರ ಸಹಯೋಗದಲ್ಲಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ 1 ಮತ್ತು 2 ರಲ್ಲಿ ಶೇ.100% ಫಲಿತಾಂಶ ಪಡೆದು ಅತ್ಯುತ್ತಮ ಸಾಧನೆ ಮಾಡಿದ ಶಾಲೆಯ ಮುಖ್ಯಸ್ಥರನ್ನು ಅಭಿನಂದಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮವು ಶ್ರೀ ಷ.ಬ್ರ. ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ವೇದಿಕೆಯ ಮೇಲೆ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಮತ್ತು ಅಧಿಕಾರಿಗಳಿಂದ ಉದ್ಘಾಟನೆಗೊಂಡಿತು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಟಿ.ಆರ್. ಮಲ್ನಾಡದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹುಕ್ಕೇರಿ, ಶ್ರೀಮತಿ ಪ್ರಭಾವತಿ ಪಾಟೀಲ್ ಕ್ಷೇತ್ರ ಶಿಕ್ಷಣಾಧಿಕಾರಿ ಹುಕ್ಕೇರಿ, ಶ್ರೀ ಜೆ.ಪಿ. ತಂಗಡಿ ಪ್ರಾಚಾರ್ಯರು ಡಯಟ್ ಚಿಕ್ಕೋಡಿ, ಶ್ರೀಮತಿ ಸವಿತಾ ಹಲಕಿ ಅಕ್ಷರ ದಾಸೋಹ ಯೋಜನೆ ತಾಲೂಕು ಪಂಚಾಯತ್ ಹುಕ್ಕೇರಿ, ಶ್ರೀ ಎ.ಎಸ್. ಪದ್ಮನ್ನವರ್ ಕ್ಷೇತ್ರ ಸಮನ್ವಯಾಧಿಕಾರಿ ಹುಕ್ಕೇರಿ, ವಲಯದ ಎಲ್ಲಾ ಶಿಕ್ಷಣ ಘಟಕದ ಮುಖ್ಯಸ್ಥರು ಹಾಗೂ ತಾಲೂಕಿನ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
ಶ್ರೀ ಗುರುಶಾಂತೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಹಿರೇಮಠ ಹುಕ್ಕೇರಿ – ಶ್ರೀ ಎಸ್.ಬಿ. ಜಿನರಾಳಿ ಮುಖ್ಯೋಪಾಧ್ಯಾಯರು 2025-26ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 100ಕ್ಕೆ 100% ಫಲಿತಾಂಶ ಪಡೆದು ಉತ್ತಮ ಸಾಧನೆಗೈದಿದ್ದಕ್ಕಾಗಿ ಈ ಸಂದರ್ಭದಲ್ಲಿ ಗೌರವಿಸಿ ಸತ್ಕರಿಸಲಾಯಿತು. ಹುಕ್ಕೇರಿ ತಾಲೂಕಿನಾದ್ಯಂತ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
