ಕಲಬುರ್ಗಿ ಯಲ್ಲಿ ನಡೆಯಲ್ಲಿರುವ ವಿಶ್ವ ರೈತರ ದಿನಾಚರಣೆ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ರೈತ ಮುಖಂಡರು ವೀರಣ್ಣ ಗಂಗಾಣಿ ಪತ್ರಿಕಾ ಪ್ರಕಟಣೆಯ ಮುಖಾಂತರ ಮನವಿಯನ್ನ ಮಾಡಿದ್ದಾರೆ, ದಿನಾಂಕ 23/12/25 ರಂದು ಕಲಬುರಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ ವಿಶ್ವ ರೈತದಿನಾಚರಣೆಯನ್ನು ಕರ್ನಾಟಕ ರೈತ ಸಂಘ ಹಾಗೂ ತಾಲೂಕು ರೈತ ಸಂಘ ಅಧ್ಯಕ್ಷರಾದ ವೀರಣ್ಣ ಗಂಗಾಣಿ, ಹಾಗೂ ಶಿವರಾಜ ಪಾಟೀಲ ಗೋಣಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಸಮ್ಮುಖದಲ್ಲಿ ಡಾ. ಎಸ್. ಎಂ. ಪಂಡಿತ ರಂಗ ಮಂದಿರ ಸ್ಥಳದಲಿ ನಡೆಯಲಿದ್ದು, ಕಲಬುರಗಿ ಜಿಲ್ಲೆ ಎಲ್ಲ ರೈತರು ಭಾಗವಸಬೇಕು ಮತ್ತು ನಮ್ಮ ಭಾಗದಲ್ಲಿ ಅತಿ ವೃಷ್ಟಿಯಿಂದ ರೈತರ ಜೀವನಕ್ಕೆ ಆಸರೆಯಾದ ಬೆಳೆಗಳಾದ ಹೆಸರು, ಉದ್ದು, ತೊಗರಿ, ಇನ್ನಿತರ ಬೆಳೆ ಸಂಪೂರ್ಣ ಹಾಳಾಗಿದ್ದು ಪರಿಹಾರದಲ್ಲಿ ಅನ್ಯಾಯ ಆಗಿದ್ದು ಅಲ್ಪ ಸ್ವಲ್ಪ ಪರಿಹಾರ ಬಂದಿದೆ ವಿಶೇಷವಾಗಿ ಧಿರ್ಗಾವಧಿ ಬೆಳೆ ಕಬ್ಬು ಕೂಡ ಮಳೆಯಿಂದ ಸಮೃದ್ಧಿ ಹಾಗೂ ಅಭಿವೃದ್ಧಿ ಹೊಂದಿಲ್ಲ ಕಬ್ಬಿಗೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ ಹಾಗಾಗಿ ಇವುದೆಲ್ಲದರ ಮೇಲೆ ಚರ್ಚೆ ಮಾಡಲು ಎಲ್ಲಾ ರೈತರಿಗೆ ಅವಕಾಶ ಸಿಗುತ್ತದೆ. ಅದಕ್ಕಾಗಿ ನಾಳೆ ತಪ್ಪದೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿಯನ್ನ ಮಾಡಿದ್ದಾರೆ.
ವರದಿ : ರಾಜೇಂದ್ರ ಪ್ರಸಾದ್
