ಚಿಂಚೋಳಿ : ಚಂದಾಪುರ ಪಟ್ಟಣದ ನವನಗರ ಬಡಾವಣೆಯಲ್ಲಿ ಕರಬಸಪ್ಪ ದೇಶಮುಖ್ ಗುರುಸ್ವಾಮಿಗಳು ಮಾಲಾಧಾರಿಗಳು ಕೇತಕಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಇವರಿಂದ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿಯವರ ಪೂಜಾ ಕಾರ್ಯಕ್ರಮ ಹಾಗೂ ಮಹಾ ಪಡಿಪೂಜೆ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆರವೇರಿತು. ಪಡಿಪೂಜೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಖ್ಯಾತ
ಬಾಲ ಗಾಯಕಿ ದಿವ್ಯಾ ಹೆಗಡೆ ಜೀ ಕನ್ನಡ ಸರಿಗಮಪ ಸ್ಪರ್ದಾಳು ಅವರಿಂದ ಶ್ರೀ ಅಯ್ಯಪ್ಪ ಸ್ವಾಮಿ ಹಾಡುಗಳನ್ನು ಹಾಡಿಸಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಭಕ್ತಾದಿಗಳಿಗೆ ಭಕ್ತಿಯಲ್ಲಿ ತೇಲುವಂತೆ ತಮ್ಮ ಮಧುರ ಕಂಠದಿಂದ ಹಾಡಿ ಮಂತ್ರ ಮುಗ್ಧನಾಗಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಭಕ್ತ ಕುಂಬಾರ ಕಾರ್ಯಕ್ರಮದ ನಿರೂಪಣೆಯನ್ನು ಭಕ್ತ ಕುಂಬಾರ ಅವರು
ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ಬಸ್ಸಮ್ಮ ಕರಿಬಸಪ್ಪ ದೇಶಮುಖ್, ವೀರಶೆಟ್ಟಿ ದೇಶಮುಖ್, ಅಯ್ಯಪ್ಪ ಸ್ವಾಮಿ ಗುರು ಸ್ವಾಮಿಗಳಾದ ಜಗದೀಶ ಬಂತಲು, ಲಕ್ಷ್ಮಿಕಾಂತ ಹೊಸಮನಿ, ಗಿರೀಶ ಮಠಪತಿ ಸ್ವಾಮಿ ಜೆರಟಗಿ, ಬಸಯ್ಯಸ್ವಾಮಿ, ಸಂಜೀವ ಕುಮಾರ ಸ್ವಾಮಿ, ಶಿವುಸ್ವಾಮಿ, ಚನ್ನುಸ್ವಾಮಿ, ಪ್ರಭು ಸ್ವಾಮಿ, ಶ್ರೀನಿವಾಸ ಸ್ವಾಮಿ,ರಾಜು ಸ್ವಾಮಿ, ಗೋಳಾಲಪ್ಪ ಸ್ವಾಮಿ, ಅಂಬಣ್ಣ ಸ್ವಾಮಿ, ಬಸವರಾಜ ಮಠ ಸ್ವಾಮಿ, ಲಕ್ಷ್ಮಣ ಸ್ವಾಮಿ, ದೊಡ್ಡಪ್ಪ ಹೂಗಾರ ಸ್ವಾಮಿ, ಸಾವಿರದ ಸಂಖ್ಯೆಯ ಮಾಲಾಧಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್
