ಹುಮನಾಬಾದ : ವೈವಿದ್ಯಮಯವಾದ ದೇಶಕ್ಕೆ ಪ್ರಬುದ್ಧವಾದ ಸಂವಿಧಾನ ನೀಡುವಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕೊಡುಗೆ ಅವಿಸ್ಮರಣೀಯ ಎಂದು ಶಾಸಕ ಸಿದ್ದು ಪಾಟೀಲ್ ಹೇಳಿದರು ತನ್ನ ಕ್ಷೇತ್ರದ ಹುಮ್ನಾಬಾದ್ ಹಾಗೂ ಚಿಟಗುಪ್ಪಾ ತಾಲ್ಲೂಕ ಆಡಳಿತ ವತಿಯಿಂದ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಧ್ವಜಾರೋಹಣದಲ್ಲಿ ಭಾಗವಹಿಸಿ, ಗೌರವ ವಂದನೆಗಳನ್ನು ಸಲ್ಲಿಸಿದರು,
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಶಾಂತಿಯುತವಾಗಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ.ಆರ್ ಅಂಬೇಡ್ಕರ್ ರವರು ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಈ ದಿನ ಸ್ಮರಿಸೋಣ.
ಪ್ರತಿಯೊಬ್ಬರಿಗೆ ಸ್ವಾತಂತ್ರ್ಯ ಸಿಗಬೇಕೆಂದು ಹೋರಾಟ ಮಾಡಿದರು. ಗೌರವ ಸಮರ್ಪಣೆ, ಮುಕ್ತ ಅವಕಾಶ, ಸಮಾನತೆ ಸಿಗಬೇಕೆಂಬ ನಿಟ್ಟಿನಲ್ಲಿ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಜಾರಿಗೆ ತಂದ ಮಹತ್ವದ ದಿನ ಇದಾಗಿದೆ ಹಲವು ಧರ್ಮ, ಜಾತಿ, ಸಂಸ್ಕೃತಿಯನ್ನೊಳಗೊಂಡ ವೈವಿದ್ಯಮಯವಾದ ದೇಶಕ್ಕೆ ಪ್ರಬುದ್ಧವಾದ ಸಂವಿಧಾನ ನೀಡುವಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕೊಡುಗೆ ಅವಿಸ್ಮರಣೀಯ, ಕಳೆದ 77 ವರ್ಷಗಳಲ್ಲಿ ವಿಜ್ಞಾನಿಗಳು, ರೈತರು ಹಾಗೂ ಎಲ್ಲ ನಾಗರಿಕರು ಭಾರತವನ್ನು ಕಟ್ಟುವ ಕೆಲಸ ಮಾಡಿದ್ದಾರೆ ಎಂದರು.
