ಹುಮನಾಬಾದ್ ಪಟ್ಟಣದ ಶ್ರೀ ವೀರಭದ್ರೇಶ್ವರ ಐಟಿಐನಲ್ಲಿ ನಡೆದ ಮಹಾತ್ಮ ಗಾಂಧಿಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ

ಹುಮನಾಬಾದ್ ಪಟ್ಟಣದ ಶ್ರೀ ವೀರಭದ್ರೇಶ್ವರ ಐಟಿಐನಲ್ಲಿ ನಡೆದ ಮಹಾತ್ಮ ಗಾಂಧಿಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮೇರಾ ಯುವ ಭಾರತ್‍ನ ಲಕ್ಷ್ಮಣ ಪಿ. ಮಚಕುರೆ ಮಾತನಾಡಿದರು.

ಬೀದರ್: ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ಐಟಿಐನಲ್ಲಿ ಶುಕ್ರವಾರ ಮಹಾತ್ಮ ಗಾಂಧಿಜಿ ಪುಣ್ಯಸ್ಮರಣೆ ಆಚರಿಸಲಾಯಿತು.
ಕಾಲೇಜಿನ ತರಬೇತಿ ಅಧಿಕಾರಿ ವಿಶ್ವನಾಥ ಬಿರಾದಾರ ಅವರು ಗಾಂಧಿಜಿ ಅವರ ಜೀವನ ಮತ್ತು ಸಾಧನೆ ಮೇಲೆ ಬೆಳಕು ಚೆಲ್ಲಿದರು.
ಮೇರಾ ಯುವ ಭಾರತ್‍ನ ತಾಲ್ಲೂಕು ಕಾರ್ಯಕ್ರಮ ಸಂಯೋಜಕ ಲಕ್ಷ್ಮಣ ಪಿ. ಮಚಕುರೆ ಅವರು ಮೇರಾ ಯುವ ಭಾರತ್ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದು ಎಂದು ಪ್ರೋತ್ಸಾಹಕ ಮಾತುಗಳನ್ನು ಆಡಿದರು.
ಪ್ರಾಚಾರ್ಯ ಶಿವಕುಮಾರ ಡಿ. ಅಧ್ಯಕ್ಷತೆ ವಹಿಸಿದ್ದರು. ರಮೇಶ ಎಸ್. ಹೊಸಮನಿ, ಉಪನ್ಯಾಸಕರಾದ ಆರತಿ, ಮಲ್ಲಮ್ಮ, ನಿವೇದಿತಾ, ಗಂಗಾ, ರೇಖಾ ಉಪಸ್ಥಿರಿದ್ದರು. ಶಶಿಕಾಂತ ರೆಡ್ಡಿ ನಿರೂಪಿಸಿದರು.
ಪಿಯುಸಿ, ಐಟಿಐ ವಿದ್ಯಾರ್ಥಿಗಳು, ಬೋಧಕ, ಬೋಧಕೇರತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕೇಂದ್ರ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಅಧೀನದ ಮೇರಾ ಯುವ ಭಾರತ ಹಾಗೂ ಮಾಡಗೂಳದ ಸ್ವಾಮಿ ವಿವೇಕಾನಂದ ಯುವಕ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ಹ್ಮಮಿಕೊಳ್ಳಲಾಗಿತ್ತು.

error: Content is protected !!