ಬಾಲ್ಯ ವಿವಾಹರಲ್ಲಿ ಪಾಲ್ಗೊಂಡಂತಹ ಎಲ್ಲರಿಗೂ 2 ವರ್ಷಗಳ ಕಾಲ ಜೈಲುವಾಸ ಮತ್ತು 1 ಲಕ್ಷ ದಂಡ

ಚಿಂಚೋಳಿ : ತಾಲೂಕಿನ ಸುಲೇಪೇಟನ ಸರಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಕಲಬುರಗಿ ಜಿಲ್ಲೆ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರು ಶ್ರೀನಿವಾಸ ನವಿಲೆ ರವರು ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ ಬಾಲ್ಯದಲ್ಲಿ ಮಕ್ಕಳು ಶಿಕ್ಷಣ ಪಡೆದು ತಮ್ಮ ಸ್ವಾವಲಂಬಿ ಜೀವನ ಸಾಗಿಸಲು ಸಶಕ್ತರಾಗುವವರೆಗೂ ಹೆಣ್ಣು ಮಕ್ಕಳು 18 ವರ್ಷ ವಯಸ್ಸಿನ ವರೆಗೂ ಗಂಡು ಮಕ್ಕಳು 21 ವರ್ಷಗಳ ವರೆಗೆ ಮದುವೆ ಮಾಡಿಕೊಳ್ಳುವಂತಿಲ್ಲ ಕಾನೂನು ಆಗಿದ್ದು, ಕಾನೂನು ಬಾಹಿರ ಬಾಲ್ಯ ವಿವಾಹ ಮಾಡಿದರೆ ವಧುವಿನ ತಂದೆ ತಾಯಿ, ವರನ ಪಾಲಕರು, ವಿವಾಹ ಮಾಡಿಸಿದ ಪುರೋಹಿತರು, ಕಲ್ಯಾಣ ಮಂಟಪದ ಮಾಲೀಕರು, ರಸಮಂಜರಿ ಸಂಗೀತ ವಾದಕರಿಗೆ, ಹಾಗೂ ಸಹಕರಿಸಿದ ಎಲ್ಲರಿಗೂ 2 ವರ್ಷಗಳ ಕಾಲ ಜೈಲುವಾಸ ಮತ್ತು 1 ಲಕ್ಷ ದಂಡ ವಿಧಿಸಲಾಗುವುದು. ಆದ್ದರಿಂದ ತಮ್ಮ ಸುತ್ತ ಮುತ್ತ ಇಂತಹ ರೀತಿಯ ಪ್ರಕರಣ ಕಂಡುಬಂದರೆ 1098 ಸಹಾಯವಾಣಿಗೆ ಕರೆ ಮಾಹಿತಿ ನೀಡುವುದು, ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿ ಇಡಲಾಗುತ್ತದೆ. ತಮಗೆ ಯಾವುದೇ ಕಾನೂನಿನ ನೆರವು ಬೇಕಾದಲ್ಲಿ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಉಚಿತವಾಗಿ ಕಾನೂನಿನ ನೆರವು ನೀಡಲಾಗುತ್ತದೆ ಮತ್ತು
ಹೆಣ್ಣು ಮಕ್ಕಳು ಜಾಗ್ರತೆ ವಹಿಸಬೇಕು ಹಾಗೂ ಯಾವುದೇ ಸಮಸ್ಯೆಗಳು ಕಂಡುಬಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೋಲೀಸ್ ಇಲಾಖೆಯ ಸಹಾಯವನ್ನು ಪಡೆಯಬೇಕು ಎಂದು ಹೇಳಿದರು.
ಕ್ಷೇತ್ರಶಿಕ್ಷಣಾಧಿಕಾರಿಗಳಾದ ಲಕ್ಷ್ಮಯ್ಯ.ವಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸುರೇಶ ವಾಲೀಕಾರ, ವೇದಕುಮಾರ ಶಾಸ್ತ್ರೀ, ಶಿವಪ್ರಸಾದ್ ಪಿ ಜಿ, ಪ್ರಭು ಮತ್ತು ಮಕ್ಕಳು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!